ಗದಗ : ನಿನ್ನೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಕಾಮಗಾರಿ ಒಂದಕ್ಕೆ ಗುತ್ತಿಗೆದಾರನ ಬಳಿ 5ಲಕ್ಷ ರೂಪಾಯಿ ಕಮಿಷನ್ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕ ಚಂದ್ರು ಲಮಾಣಿ ಹಾಗೂ ಗುತ್ತಿಗೆದಾರನ ನಡುವಿನ ಆಡಿಯೋ ಒಂದು ವೈರಲಾಗಿದೆ.
ಹೌದು ಕಮಿಷನ್‌ಗಾಗಿ ಶಾಸಕ ಚಂದ್ರು ಲಮಾಣಿ ಅವರು ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ. ಸೊಂಟ ಮುರಿಸ್ತೀನಿ.. ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ನಮ್ಮ ತಾಲೂಕಿನಲ್ಲಿ ಮಾಡಿದ್ರೆ ಸೊಂಟ ಮುರಿಸ್ತೀನಿ ಅಂತ ಗುತ್ತಿಗೆದಾರನ ವಿರುದ್ಧ ಲಮಾಣಿ ಗರಂ ಆಗಿದ್ದಾರೆ. ಈ ವೇಳೆ, ಇದೊಂದು ಸಾರಿ ತಪ್ಪಾಗಿದೆ ಅಂತ ಗುತ್ತಿಗೆದಾರ ಮಾತನಾಡಿದ್ದಾರೆ.
ಆಡಿಯೋದಲ್ಲೇನಿದೆ?
ನಾನು ಸರಳ ಅನ್ಕೊಂಡ್ರೆ ನಡಾನೆ ಮುರಿಸ್ತೀನಿ… ಪ್ರೀತಿ ವಿಶ್ವಾಸದಿಂದ ಹೇಳಿದ್ರೆ ನಾಟಕ ಮಾಡ್ತೀಯಾ…. ಸುಳ್ಳು ಹೇಳ್ತೀಯಾ ನೀನು… ಯಲ್ಲಮ್ಮ ಹೋಗಿನಿ ಮಲ್ಲಮ್ಮಗೆ ಹೋಗಿನಿ… ನಿಮ್ಮ ತಾಲ್ಲೂಕಿನಲ್ಲಿ ಮಾಡಿದಂಗೆ ನಮ್ಮ ತಾಲ್ಲೂಕಿನಲ್ಲಿ ಮಾಡಿದ್ರೆ ನಡಾ ಮುರಿಸ್ತೀನಿ.
ಆಗ ಗುತ್ತಿಗೆದಾರ ಸರ್ ಇದೊಂದು ಸಾರಿ ತಪ್ಪು ಆಗಿದೆ ಎಂದು ಹೇಳುತ್ತಾರೆ. ಬಳಿಕ ಚಂದ್ರು ಲಮಾಣಿ ಹೇ ಯಾರ್ ಹೆಸರಲ್ಲಿ ಇದೆ ಎಂದು ಕೇಳಿದಾಗ ಗುತ್ತಿಗೆದಾರ ನಮ್ಮ ಹೆಸರಲ್ಲೇ ಇದೆ ಸರ್ ಎರಡು ಹೇಳಿದ್ವಿ ಸರ್ ನಿಮಗೆ ಕನ್‌ಫ್ಯೂಸ್ ಆಗಿದೆ ಸರ್ ಎಂದು ಹೇಳುತ್ತಾರೆ. ಆಗ ಶಾಸಕ ಚಂದ್ರು ಲಮಾಣಿ ನನಗೇನೂ ಗೊತ್ತಿಲ್ಲ ಅನ್ಕೊಂಡಿಯ? ಕನ್‌ಫ್ಯೂಸ್ ಮಾಡೋಕೆ ಹೇ ಬಿಡೋ ಎರಡು ಹೇಳಾನ ಅಂತಾ ನಾನ್ ಕನ್‌ಫ್ಯೂಸ್ ಆಗಿನಿ ಅಂತೆ ಎಂದು ಮಾತನಾಡಿರೋ ಆಡಿಯೋ ವೈರಲ್ ಆಗಿದೆ.








