ಬಾಗಲಕೋಟೆ : ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಮಾತೃ ವಿಯೋಗ. ಸಚಿವ ಶಿವಾನಂದ್ ಪಾಟೀಲ್ ಗಂಗಾಬಾಯಿ (84) ಇಂದು ವಿಧಿವಶರಾಗಿದ್ದಾರೆ.
ಗಂಗಾಬಾಯಿ ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯರು ಇದ್ದಾರೆ. ಸಂಜೆ 4:30ಕ್ಕೆ ಗಂಗಾಬಾಯಿ ಸಿದ್ದರಾಮಯ್ಯ ಪಾಟೀಲ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿಜಯಪುರದ ಜಮಖಂಡಿ ರಸ್ತೆಯಲ್ಲಿರುವ ತೋಟದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.








