ಬೆಂಗಳೂರು : ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕದ ಸುಪ್ರಸಿದ್ದ ನಂದಿನಿ ಬ್ರಾಂಡ್ ಗಳ ಕುರಿತು ಫೇಕ್ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಈ ಒಂದು ನಕಲಿ ಉತ್ಪನ್ನಗಳ ತಡೆಗೆ ಕೆಎಂಎಫ್ ಮಾಸ್ಟರ್ ಪ್ಲಾನ್ ಮಾಡಿದ್ದು, ಗ್ರಾಹಕರು ಬಳಸುವ ನಂದಿನಿ ಬ್ರಾಂಡ್ ಅಸಲಿಯೋ ನಕಲಿಯೋ ಎಂದು ತಿಳಿಯಲು ಇದೀಗ ಹೊಸ ಪ್ಲಾನ್ ಸಿದ್ಧಪಡಿಸಿದೆ.
ಹೌದು ಕೆಎಂಎಫ್ ಸದ್ಯ ನಂದಿನಿ ಉತ್ಪನ್ನಗಳ ಪ್ಯಾಕೆಟ್ ಮೇಲೆ ಕ್ಯೂಆರ್ ಕೋಡ್ ಅಳವಡಿಕೆ ಮೂಲಕ ಬ್ರ‍್ಯಾಂಡ್ ಶ್ರೇಣಿ ಕಾಪಾಡುವ ಜೊತೆಗೆ ನಕಲಿ ಉತ್ಪನ್ನಗಳ ಹಾವಳಿಗೂ ಬ್ರೇಕ್ ಹಾಕಲು ಮುಂದಾಗಿದೆ. ಆರಂಭಿಕವಾಗಿ ತುಪ್ಪದ ಪ್ಯಾಕೆಟ್ ಮತ್ತು ಬಾಟಲ್‌ಗಳ ಮೇಲೆ ಈ ಕೋಡ್ ಅಳವಡಿಕೆ ಮಾಡಿದೆ. ತುಪ್ಪ ಕ್ವಾಲಿಟಿ ಅಥವಾ ಅಸಲಿತನವನ್ನ ಪರೀಕ್ಷೆ ಮಾಡಬೇಕಿದ್ರೆ ನೇರವಾಗಿ ಕೋಡ್‌ನ್ನ ಒಮ್ಮೆ ಸ್ಕ್ಯಾನ್ ಮಾಡಿ, ನಂಬರ್ ಹಾಕಿದ್ರೆ, ಒಟಿಪಿ ಬರಲಿದೆ.
ಇದನ್ನ ಎಂಟರ್ ಮಾಡಿದ ಕೂಡಲೇ ಆ ತುಪ್ಪದ ಸಂಪೂರ್ಣ ಮಾಹಿತಿ ನಿಮ್ಮ ಫೋನ್‌ನಲ್ಲಿ ಸಿಗಲಿದೆ. ಎಲ್ಲಿ ತಯಾರಾಗಿದೆ. ಯಾವಾಗ ತಯಾರಿಕಾ ಜಾಗದಿಂದ ಮಾರುಕಟ್ಟೆಗೆ ಬಂದಿದೆ. ಅದರ ಮಾರ್ಕೆಟ್ ಕೋಡ್ ಏನು? ಈ ಎಲ್ಲಾ ಅಂಶಗಳು ಇದರಲ್ಲಿ ಒಳಗೊಂಡಿರಲಿದೆ. ಸದ್ಯ ಈ ಹೊಸ ಐಡಿಯಾ ತುಪ್ಪದ ಪ್ಯಾಕೆಟ್ ಮೇಲೆ ಮಾತ್ರ ಜಾರಿಗೆ ಬಂದಿದೆ. ಹಂತ ಹಂತವಾಗಿ ಇತರ ಉತ್ಪನ್ನಗಳ ಮೇಲೆಯೂ ಹಾಕಲು ಕೆಎಂಎಫ್ ಚಿಂತನೆ ನಡೆಸಿದೆ.
ನಂದಿನಿ, ಕರ್ನಾಟಕದ ಹೆಮ್ಮೆಯ ಹಾಲು ಉತ್ಪನ್ನಗಳ ಬ್ರ‍್ಯಾಂಡ್. ರಾಜ್ಯ ಮಾತ್ರ ಅಲ್ಲದೇ, ವಿದೇಶಗಳಲ್ಲೂ ತನ್ನ ಕ್ವ್ಯಾಲಿಟಿಯಿಂದಲೇ ಜನರ ಅಚ್ಚುಮೆಚ್ಚು ಎನಿಸಿಕೊಂಡಿದೆ. ಆದರೆ ಕಳೆದ ಕೆಲ ದಿನಗಳ ಹಿಂದೆ ಹೆಮ್ಮೆಯ ನಂದಿನಿ ಬ್ರ‍್ಯಾಂಡ್ ಹೆಸರಲ್ಲಿ ನಕಲಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದವು. ಕೊನೆಗೆ ಕೆಎಂಎಫ್ ಅಧಿಕಾರಿಗಳೇ ಪೊಲೀಸರೊಂದಿಗೆ ಇವುಗಳ ಪತ್ತೆ ಕೂಡ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತಷ್ಟು ಅಲರ್ಟ್ ಆಗಿರೋ ಕೆಎಂಎಫ್ ಉತ್ಪನ್ನದ ಮತ್ತಷ್ಟು ಸೇಫ್ಟಿಗೆ ಈಗ ಹೊಸ ಪ್ಲ್ಯಾನ್ ಜಾರಿ ಮಾಡಿದೆ.








