ಬಾಗಲಕೋಟೆ : ನಗರದಲ್ಲಿ ಶಿವಾಜಿ ಜಯಂತಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಪ್ರತಿಕ್ರಿಯೆ ನೀಡಿದ್ದು, ಘಟನೆಯ ಕುರಿತ ಎಲ್ಲಾ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬುಧವಾರ ಸಂಜೆ ನಡೆದ ಈ ಘಟನೆಯ ಹಿನ್ನೆಲೆ 8 ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲಾ ಎಸ್ ಪಿ ಸಿದ್ದಾರ್ಥ ಗೊಯಲ್ ಮಾಹಿತಿ ನೀಡಿದ್ದು, ಈ ಗಲಾಟೆ ಪೂರ್ವ ಯೋಜಿತವಾಗಿದ್ದಲ್ಲ ಮತ್ತು ಡಿಜೆ ವಿಚಾರಕ್ಕಾಗಿಯಾಗಿ ಕಲ್ಲು ತೂರಾಟ ನಡೆದಿಲ್ಲ. ರಾತ್ರಿ ಸುಮಾರು 10 ಗಂಟೆ 6 ನಿಮಿಷಕ್ಕೆ ಕಲ್ಲು ತೂರಾಟವಾಗಿದ್ದು, ಈ ವೇಳೆ ನನಗೆ ಮತ್ತು ಇಬ್ಬರು ಕಾನ್ಸ್ಟೇಬಲ್ಗಳಿಗೆ ಗಾಯಗಳಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ. ಕಲ್ಲು ತೂರಾಟದ ಜೊತೆ ಚಪ್ಪಲಿಯನ್ನು ಕೂಡ ಎಸೆಯಲಾಗಿದೆ.
ಮಸೀದಿ ಒಳಗೆ ಕಲ್ಲಿನಿಂದ ಶೂ ರ್ಯಾಕ್ ಮಾಡಲಾಗಿತ್ತು. ಅದೇ ರ್ಯಾಕ್ನ ಕಲ್ಲು ತೆಗೆದುಕೊಂಡು ತೂರಾಟ ನಡೆಸಲಾಗಿದೆ. ಮಸೀದಿಯೊಳಗೆ ಯಾವುದೇ ರಾಡ್ ಆಗಲಿ ಬೇರೆ ಅಸ್ತ್ರವಾಗಲಿ ಇರಲಿಲ್ಲ. ಗಲಾಟೆ ಹಿನ್ನೆಲೆ ಬಿಎನ್ಎಸ್ 163ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ಹೇಳಿದ್ದಾರೆ.
ಮಸೀದಿಯಲ್ಲಿ ಇದ್ದಂತಹ ತಂಜೀರ್ ಎಂಬತ ಕಲ್ಲು ತೂರಾಟ ಮಾಡಿದ್ದಾನೆ. ಪ್ಲಾನ್ ಮಾಡಿ ತೂರಾಟ ಮಾಡಿಲ್ಲ ಅಂತ ಅವನು ಹೇಳಿದ್ದಾನೆ. ಆ ಕಲ್ಲು ನಮ್ಮ ಇಬ್ಬರು ಪಿಸಿಗಳಿಗೆ ಬಂದು ಬಿದ್ದಿದೆ ಗಲಾಟೆಯ ವೇಳೆ ನನಗೂ ಕಲ್ಲೇಟು ಬಿದ್ದಿದೆ. ಗಲಾಟೆಯಲ್ಲಿ ಎಂಟು ಆರೋಪಿಗಳನ್ನು ಅರೆಸ್ಟ್ ಮಾಡಿದ್ದೇವೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಕೆಲವರು ಅಲ್ಲೇ ಉಳಿದಿದ್ದರು ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ನೀಡಿದರು.
ಆದರೆ, ಸಾರ್ವಜನಿಕರಿಗೆ ಅಥವಾ ಶಿವಾಜಿ ಭಾವಚಿತ್ರಕ್ಕೆ ಯಾವುದೇ ಹಾನಿಯಾಗಿಲ್ಲ, ಬದಲಾಗಿ ಪೊಲೀಸರ ಮೇಲೆ ಕಲ್ಲು ಬಿದ್ದಿದೆ. ಘಟನೆ ಹಿಂದೆ ಯಾವುದೇ ಕೋಮು ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಹೆಚ್ಚುವರಿ ಭದ್ರತೆಯನ್ನು ಒದಗಿಸಲಾಗಿದೆ. ಘಟನೆಗೆ ಸಂಬಂಧಿಸಿದ ವೀಡಿಯೊಗಳನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.








