ಕಲಬುರ್ಗಿ : ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವುದನ್ನು ಪ್ರಶ್ನಿಸಿ ತಡೆದಿದ್ದಕ್ಕೆ ಹಲ್ಲೆ ನಡೆಸಲಾಗಿದೆ. ಕಲ್ಬುರ್ಗಿಯಲ್ಲಿ ವಿದ್ಯಾರ್ಥಿಯಿಂದ ಪರೀಕ್ಷಾ ಮೇಲ್ವಿಚಾರಕರ ಮೇಲೆ ಹಲ್ಲೆ ನಡೆದಿದೆ. ಡಾಕ್ಟರ್ ಮಾಲಕರೆಡ್ಡಿ ಹೋಮಿಯೋಪತಿ ಕಾಲೇಜಿನಲ್ಲಿ ಈ ಒಂದು ಘಟನೆ ನಡೆದಿದೆ.
ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಮೇಲೆ ವಿದ್ಯಾರ್ಥಿ ಹಲ್ಲೆ ಮಾಡಿದ್ದಾನೆ ಕಾಲೇಜಿನ ವಿದ್ಯಾರ್ಥಿ ಶಹಬಾಜ್ ಎಂಬತ ಪ್ರಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದಾನೆ. ಮಟೀರಿಯ ಮೆಡಿಕ ವಿಷಯದ ಆಂತರಿಕ ಪರೀಕ್ಷೆ ನಡೆಯುತ್ತಿತ್ತು. ಮೊಬೈಲ್ ಬಳಸಿ ವಿದ್ಯಾರ್ಥಿ ಶಹಾಬಾದ್ ನಕುಲು ಮಾಡಲು ಮುಂದಾಗಿದ್ದ.
ಇದನ್ನು ಪ್ರಶ್ನಿಸಿ ಪ್ರಾಧ್ಯಾಪಕ ಶಿವರಾಜ್ ಕುಮಾರ್ ಅವರು ಆತನ ಉತ್ತರ ಪತ್ರಿಕೆಯನ್ನು ಪಡೆದಿದ್ದಾರೆ. ಈ ವೇಳೆ ಶಿವರಾಜಕುಮಾರ್ ಮೇಲೆ ಶಹಬಾಜ್ ಹಲ್ಲೆ ಮಾಡಿದ್ದಾನೆ. ವಿದ್ಯಾರ್ಥಿ ಶಹಬಾಜ್ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿದ್ಯಾರ್ಥಿಯ ನಡವಳಿಕೆಯ ಬಗ್ಗೆ ಆಡಳಿತ ಮಂಡಳಿ ಪಾಲಕರಿಗೆ ಮಾಹಿತಿ ನೀಡಿದೆ. ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡಿದರಲು ಕಾಲೇಜು ಆಡಳಿತ ಮಂಡಳಿ ನಿರ್ಧರಿಸಿದೆ.








