ಬೆಂಗಳೂರು : ಕಳೆದ ಜನವರಿಯಲ್ಲಿ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿ ಉದ್ಯೋಗಿ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆರೋಪಿ ಕರ್ನಲ್ ಕುರೈ ಕೆಲವು ವಿಕೃತಿ ವಿಚಾರಗಳು ಬೆಳಕಿಗೆ ಬಂದಿವೆ.
ಪ್ರಕರಣದ ಆರೋಪಿಯಾಗಿರುವ 18 ವರ್ಷದ ಕರ್ನಲ್ ಕುರೈ ಯಾವ ರೀತಿ ಕೃತ್ಯ ಎಸಗಿದ್ದಾನೆ ಎನ್ನುವುದು ಇದೀಗ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ. ಶರ್ಮಿಳಾದ ಶವದ ಮೇಲೆ ಅತ್ಯಾಚಾರಕ್ಕೆ ಆರೋಪಿ ಕರ್ನಲ್ ಯತ್ನಿಸಿದ್ದಾನೆ ಎನ್ನುವುದು ಬೆಳಕಿಗೆ ಬಂದಿದೆ. ಜನವರಿ 16 ರಂದು ರಾಮಮೂರ್ತಿ ನಗರದಲ್ಲಿ ಈ ಒಂದು ಕೊಲೆ ನಡೆದಿತ್ತು.
ಪಕ್ಕದ ಮನೆಯ ಶರ್ಮಿಳಾಳನ್ನು ಕರ್ನಾಲ್ ಕ್ರೂರವಾಗಿ ಕೊಂದಿದ್ದ. ಅತ್ಯಾಚಾರಕ ಯತ್ನಿಸಿದ ವೇಳೆ ಶರ್ಮಿಳ ಪ್ರತಿರೋಧ ಒಡ್ಡಿದ್ದಳು. ಸೋಫಾ ಗೆ ಶರ್ಮಿಳಾ ತಲೆಗೆ ಬಡಿದು, ತಲೆಯಿಂದ ತೀವ್ರವಾಗಿ ರಕ್ತಸ್ರಾವ ಆಗಿತ್ತು. ಆಕೆ ಎಷ್ಟೇ ಬೇಡಿಕೊಂಡರು ಬಿಡದೆ ಕತ್ತುಹಿಸಿಕೆ ಶರ್ಮಿಳಾಳನ್ನು ಕರ್ನಲ್ ಕೊಲೆ ಮಾಡಿದ್ದ. ರಕ್ತದ ಮಡುವಿನಲ್ಲಿ ಶರ್ಮಿಳ ಬಿದ್ದಿದ್ದರು ಆಕೆಯ ಶವದ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಇದೀಗ ಪೊಲೀಸರ ವಿಚಾರಣೆ ವೇಳೆ ಸತ್ಯ ಹೊರ ಹಾಕಿದ್ದಾನೆ.








