ಚಿಕ್ಕಮಗಳೂರು: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ವಂಚನೆಯ ಮಹಾ ಮೋಸದ ಜಾಲ ಬೆಳಕಿಗೆ ಬಂದಿದೆ. ಶಾಕಿಂಗ್ ಎನ್ನುವಂತೆ ಬ್ಯಾಂಕ್ ನಲ್ಲಿ ಇರಿಸಿದ್ದಂತ ಗ್ರಾಹಕರ ಅಸಲಿ ಚಿನ್ನವೇ ನಾಪತ್ತೆಯಾಗಿರೋದಾಗಿ ಹೇಳಲಾಗುತ್ತಿದೆ.
ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ಮಹಾ ಮೋಸ ಎನ್ನುವಂತೆ ಚಿಕ್ಕಮಗಳೂರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ನಡೆದಿರೋದು ಬೆಳಕಿಗೆ ಬಂದಿದೆ. ಇದರಲ್ಲಿ ಗ್ರಾಹಕರು ಇರಿಸಿದ್ದಂತ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನೇ ಬ್ಯಾಂಕ್ ಸಿಬ್ಬಂದಿ ಲೂಟಿ ಮಾಡಿರೋದಾಗಿ ಆರೋಪಿಸಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಚಿಕ್ಕಮಗಳೂರು ಶಾಖೆಯ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣಸ್ವಾಮಿ ಸೇರಿದಂತೆ ಐವರ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂದಹಾಗೇ 2020ರಿಂದ 2025ರ ಅವಧಿಯಲ್ಲಿ ಚಿಕ್ಕಮಗಳೂರು ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಬೃಹತ್ ಹಗರಣ ನಡೆದಿದೆ ಎಂದು ಹೇಳಲಾಗುತ್ತಿದೆ. ಗ್ರಾಹಕರೊಬ್ಬರ ಮಾಹಿತಿಯಂತೆ ಅವರ ಹೆಸರಿನಲ್ಲಿ ಹೆಚ್ಚುವರಿ ಗೋಲ್ಡ್ ಲೋನ್ ಮಾಡಿ ಹಣವನ್ನೇ ಗುಳುಂ ಮಾಡಿದ್ದಾರೆ ಎನ್ನಲಾಗಿದೆ.
ಇದಷ್ಟೇ ಅಲ್ಲದೇ ಬ್ಯಾಂಕಿನಲ್ಲಿ ಗ್ರಾಹಕರು ಇಟ್ಟಿದ್ದಂತ ಅಸಲಿ ಚಿನ್ನವನ್ನು ಮಾರಿ, ಆ ಜಾಗದಲ್ಲಿ ನಕಲಿ ಚಿನ್ನವನ್ನು ಇಟ್ಟಿದ್ದಾರೆ ಎನ್ನಲಾಗಿದೆ. 80ಗ್ರಾಂ ನಿಂದ ಹಿಡಿದು 140 ಗ್ರಾವರೆಗೂ ಚಿನ್ನವಿಟ್ಟು ಸಾಲ ಪಡೆದಿದ್ದ ಹಲವರು ಗ್ರಾಹಕರು ಈಗ ಸಾಲ ಮರುಪಾವತಿಸಿ ಮಾಡಿದರೂ ತಮ್ಮ ಚಿನ್ನ ಪಾವಾಸ್ ಸಿಗುತ್ತಿಲ್ಲ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ. ದಯವಿಟ್ಟು ನಮ್ಮ ಹಣ, ಚಿನ್ನವನ್ನು ವಾಪಾಸ್ ಕೊಡಿಸಿ ಎಂಬುದಾಗಿ ಗ್ರಾಹಕರು ಬ್ಯಾಂಕ್ ಅನ್ನು ಒತ್ತಾಯಿಸಿದ್ದಾರೆ.
2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಶ್ವಾಸ
BREAKING : ಮೇ 5ರಿಂದ ಸುಪ್ರೀಂ ಕೋರ್ಟ್’ನಲ್ಲಿ ‘CAA’ ಪ್ರಶ್ನಿಸಿ ಸಲ್ಲಿಸಲಾದ 243 ಅರ್ಜಿಗಳ ವಿಚಾರಣೆ ಆರಂಭ!








