Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!
KARNATAKA

ಪ್ರತಿ ಮನೆಯ ಯಜಮಾನಿ ಖಾತೆಗೆ ಈವರೆಗೆ ಗೃಹಲಕ್ಷ್ಮಿ ಯೋಜನೆಯಡಿ ರೂ. 58,000 ಜಮೆ .!

By kannadanewsnow57

ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವುದೇ ನಮ್ಮ ಸಮಿತಿಯ ಮುಖ್ಯ ಉದ್ದೇಶವಾಗಿದೆ. ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಡಿ ಧಾರವಾಡ ತಾಲೂಕಿನ ಪ್ರತಿ ಅರ್ಹ ಯಜಮಾನಿಯ ಖಾತೆಗೆ ಇದುವರೆಗೆ ತಲಾ ರೂ. 58,000 ಗಳಷ್ಟು ಹಣ ನೇರವಾಗಿ ಜಮೆಯಾಗಿದೆ ಎಂದು ಧಾರವಾಡ ತಾಲೂಕ ಗ್ಯಾರಂಟಿ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ ತಿಳಿಸಿದರು.

ಅವರು ಧಾರವಾಡ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ಮೂಲಕ ಯೋಜನೆಗಳ ಅನುμÁ್ಠನದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಲು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದರು.

ವಿವಿಧ ಇಲಾಖೆಗಳ ಪ್ರಗತಿ ವರದಿ: ಗೃಹ ಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು 56,943 ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇದುವರೆಗೆ ಯಶಸ್ವಿಯಾಗಿ 29 ಕಂತುಗಳು ಪೂರ್ಣಗೊಂಡಿದ್ದು, ಒಟ್ಟು ರೂ. 6,10,91,92,000 ಹಣವನ್ನು ಫಲಾನುಭವಿಗಳ ಖಾತೆಗೆ ಸಂದಾಯ ಮಾಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಒಟ್ಟು 52,526 ಪಡಿತರ ಚೀಟಿಗಳಿದ್ದು, 70 ನ್ಯಾಯಬೆಲೆ ಅಂಗಡಿಗಳ ಮೂಲಕ ಸುಗಮವಾಗಿ ವಿತರಣೆ ನಡೆಯುತ್ತಿದೆ. ಹೊಸದಾಗಿ ಸಲ್ಲಿಕೆಯಾದ 273 ಅರ್ಜಿಗಳು ಪ್ರಸ್ತುತ ಪರಿಶೀಲನಾ ಹಂತದಲ್ಲಿವೆ.

ಗೃಹಜ್ಯೋತಿ ಯೋಜನೆಯಡಿ ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 52,195 ಫಲಾನುಭವಿಗಳು ಶೂನ್ಯ ದರದ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇಲ್ಲಿಯವರೆಗೆ ಸರ್ಕಾರದಿಂದ ರೂ. 5429.39 ಲಕ್ಷಗಳಷ್ಟು ವೆಚ್ಚ ಭರಿಸಲಾಗಿದೆ.

ಶಕ್ತಿ ಯೋಜನೆಯಡಿ ಮಾರ್ಚ್-2026 ರ ಅಂತ್ಯದವರೆಗೆ ಶಹರ ಮತ್ತು ಗ್ರಾಮೀಣ ಘಟಕಗಳ ಮೂಲಕ ಒಟ್ಟು 45,44,395 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಒಟ್ಟು ರೂ. 7,97,69,206 ಗಳಷ್ಟು ಆದಾಯ ಸಂದಾಯವಾಗಿದೆ.

ಯುವ ನಿಧಿ ಯೋಜನೆಯಡಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವರದಿಯಂತೆ 3,898 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪದವಿ ಹಾಗೂ ಡಿಪೆÇ್ಲೀಮಾ ವಿದ್ಯಾರ್ಥಿಗಳಿಗೆ ಒಟ್ಟು ರೂ. 8,57,58,000 ಗಳಷ್ಟು ನಿರುದ್ಯೋಗ ಭತ್ಯೆ ವಿತರಿಸಲಾಗಿದೆ.

ಸಭೆಯಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಕಾರ್ಯದರ್ಶಿ ಗಂಗಾಧರ ಕಂದಕೂರ, ಸಮಿತಿ ಸದಸ್ಯರಾದ ಚಂದ್ರಶೇಖರ ಕದಂ, ಮಂಜುನಾಥ ಉಡಿಕೇರಿ, ಕಾರ್ತಿಕ ಗೋಕಾಕ, ಮೈಲಾರಗೌಡ ಪಾಟೀಲ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅನುμÁ್ಠನಾಧಿಕಾರಿಗಳು ಉಪಸ್ಥಿತರಿದ್ದರು.

Rs. 58000 has been deposited into the account of each household under the Grihalakshmi scheme so far!
Share. Facebook Twitter LinkedIn WhatsApp Email

Related Posts

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

1 Min Read

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

1 Min Read

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

2 Mins Read
Recent News

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

State News
KARNATAKA

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ: ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟಿಸಿ ಒತ್ತಾಯ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಹಸುವನ್ನು (ಗೋವು) ದೇಶದ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು ಬೃಹತ್…

BREAKING : ಕೋರ್ಟ್ ವಿಚಾರಣೆಗೆ ಗೈರು ಹಿನ್ನೆಲೆ : ಬಿಜೆಪಿ ಶಾಸಕ ಶರಣು ಸಲಗಾರ್ ಕೆಲವೇ ಕ್ಷಣಗಳಲ್ಲಿ ಅರೆಸ್ಟ್ ಸಾಧ್ಯತೆ!

ಅರಣ್ಯ ರಕ್ಷಣೆಯಲ್ಲಿ ಅನನ್ಯ ಸಾಧನೆ: ಸಾಗರದ ಬಿಳಿಗಾರು ಶಾಖೆಯ ‘DRFO ಮೈಲಾರಪ್ಪ’ಗೆ ಇಲಾಖೆಯಿಂದ ಪ್ರಶಂಸಾ ಪತ್ರ

BREAKING: ರಾಮಲಿಂಗಾರೆಡ್ಡಿ ಸಚಿವ ಸ್ಥಾನದ ರಾಜೀನಾಮೆ ಹೈಡ್ರಾಮಾ ಸುಖಾಂತ್ಯ: ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿ, ವಾಪಾಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.