Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ
KARNATAKA

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

By kannadanewsnow0919/02/2026 5:16 PM

ಬೆಂಗಳೂರು: ರಾಜ್ಯಾದ್ಯಂತ ಕಂದಾಯ ನ್ಯಾಯಾಲಯಗಳಲ್ಲಿ ವರ್ಷಾನುವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಆಂದೋಲನ ಮಾದರಿಯಲ್ಲಿ ತ್ವರಿತವಾಗಿ ವಿಲೆಮಾಡಿ ಜನ ಕಛೇರಿಗಳಿಗೆ ಅಲೆದಾಡುವುದಕ್ಕೆ ವಿರಾಮ ನೀಡುವ ಪ್ರಯತ್ನ ವೇಗವಾಗಿ ನಡೆದಿದೆ. ಇದರ ಮುಖಾಂತರ ಹಿಂದೆಂದೂ ಆಗದೇ ಇದ್ದಹತ್ತಾರು ಸಾವಿರ ಪ್ರಕರಣಗಳನ್ನು ರಾಜ್ಯಾದ್ಯಂತ ವಿಲೇಮಾಡಿ, ವಿಳಂಬವನ್ನು ನಿವಾರಿಸಿ, ಆಡಳಿತ ಸುಧಾರಣೆ ತರಲಾಗುತ್ತಿದೆ.

ಹಾಲಿ ಬಾಕಿ ಉಳಿದಿರುವ ಪ್ರಕರಣಗಳ ಪೈಕಿ, ಗರಿಷ್ಠ ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇರುವುದನ್ನು ಗಮನಿಸಿ ಈ ಪ್ರಕರಣಗಳನ್ನುಸರ್ಕಾರ ಆದ್ಯತೆಯಿಂದ ಕೈಗೆತ್ತಿಕೊಂಡು ಇವುಗಳ ವಿಲೇಗೆ ವಿಶೇಷ ಪ್ರಯತ್ನ ಆರಂಭಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 4937 ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ಬಹುತೇಕ ಅಂದರೆ 4154 ಪ್ರಕರಣಗಳು 1 ವರ್ಷಕ್ಕೂ ಮೇಲ್ಪಟ್ಟುಇರುವ ಪ್ರಕರಣಗಳಾಗಿದ್ದು, ಇವುಗಳನ್ನು 20 ವರ್ಷಗಳವರೆಗಿನ ಸಮಯದಿಂದ ವಿಲೇ ಮಾಡದೆ ಬಾಕಿ ಇರಿಸಿಕೊಳ್ಳಲಾಗಿದೆ.

ಇವುಗಳ ವಿಲೇಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡದೆ ಬಾಕಿಇರಿಸಲಾಗಿದೆ. ಇಂತಹ ಎಲ್ಲಾ ಪ್ರಕರಣಗಳನ್ನು ಗುರುತಿಸಿ, ಸಂಪೂರ್ಣವಾಗಿ ಆನ್‌ಲೈನ್‌ ಕಂದಾಯ ನ್ಯಾಯಾಲಯ ವ್ಯವಸ್ಥೆಗೆ ತಂದು ಪಾರದರ್ಶಕವಾಗಿ ಪ್ರಕರಣ ಇತ್ಯರ್ಥಗೊಳಿಸುವಂತೆ ಸುಧಾರಣೆ ತರಲಾಗಿದೆ. ಆನ್‌ಲೈನ್‌ ಪದ್ಧತಿಯಿಂದ ಬಾಕಿ ಅವಧಿ, ಪ್ರಗತಿ, ಆದೇಶ ಮತ್ತು ಅನುಷ್ಠಾನ ಇವೆಲ್ಲವು ಸರಳ ಸುಲಲಿತ ಮತ್ತುಸುಲಭಗೊಳಿಸಲಾಗಿದೆ.

ಮುಂದುವರೆದು 20 ವರ್ಷಗಳಿಂದ ಬಾಕಿಯಿರುವ ಈ ಪ್ರಕರಣಗಳನ್ನು ವಿಲೇ ಮಾಡಲೇಬೇಕೆಂಬ ಸಂಕಲ್ಪ ಮಾಡಿರುವಸರ್ಕಾರ ಇದಕ್ಕಾಗಿ ಜಿಲ್ಲಾಧಿಕಾರಿಗಳ ಜೊತೆಗೆ ಒಂದು ಬಾರಿಯ ಕ್ರಮವಾಗಿ 9 ವಿಶೇಷ ಜಿಲ್ಲಾಧಿಕಾರಿಗಳನ್ನು ನೇಮಿಸಿದೆ.  ಬಾಕಿ ಇರುವ ಹಳೆಯ ಪ್ರಕರಣಗಳನ್ನು ವಿಶೇಷ ಜಿಲ್ಲಾಧಿಕಾರಿಗಳಿಗೆ ಹಂಚಿಕೆ ಮಾಡಿ, ಸಂಘಟಿತವಾಗಿ ಪ್ರಕರಣಗಳ ವಿಲೇಗೆ ಹೆಜ್ಜೆಯನ್ನುಇಟ್ಟಿದೆ.

ಇಂದು (19.02.2026) ಕಂದಾಯ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಬೆಂಗಳೂರುಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ವಿಶೇಷ ಜಿಲ್ಲಾಧಿಕಾರಿಗಳ ಪ್ರಗತಿಪರಿಶೀಲನೆ ಸಭೆಯನ್ನು ನಡೆಸಲಾಯಿತು. ವಿಶೇಷನ್ಯಾಯಾಲಯಗಳು ಹೆಚ್ಚು ಸಂಖ್ಯೆಯಲ್ಲಿ ವಿಚಾರಣೆ ನಡೆಸಲುಬೇಕಾದ ನ್ಯಾಯಾಲಯ ಸಭಾಂಗಣ, ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು.

ಸುಮಾರು 10-20 ವರ್ಷಗಳ ಹಳೇ ಪ್ರಕರಣಗಳಾಗಿರುವುದರಿಂದ ಅನೇಕ ಪ್ರಕರಣಗಳಲ್ಲಿ ಪ್ರತಿವಾದಿಗಳು ದೊರೆಯುತ್ತಿಲ್ಲ ಅಥವಾ ವಿಳಾಸ ಸರಿಯಿಲ್ಲ ಎಂಬುದನ್ನು ಗಮನಿಸಿದ ಮಾನ್ಯ ಸಚಿವರು ಇದಕ್ಕಾಗಿ ಗ್ರಾಮಆಡಳಿತಾಧಿಕಾರಿಗಳಿಂದ ವಿಚಾರಣಾ ನೊಟೀಸ್‌ಗಳನ್ನು ಜಾರಿಮಾಡಲು ಸೂಚಿಸಿದರು. ವಿಶೇಷ ಬಾಕಿ ಪ್ರಕರಣ ವಿಲೇ ಅಭಿಯಾನವಾಗುತ್ತಿರುವುದರಿಂದ ಕಕ್ಷಿದಾರರು/ಪ್ರತಿವಾದಿಗಳಸಂಬಂಧಿಸಿದ ಕಛೇರಿಯನ್ನು ಸಂಪರ್ಕಿಸಿ, ಅವರ ಇತ್ತೀಚಿನ ವಿಳಾಸ ನೀಡಬೇಕೆಂದು ಮತ್ತು ನ್ಯಾಯಾಲಯ ವಿಚಾರಣೆಗೆ ತಪ್ಪದೆಹಾಜರಾಗಿ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಮನವಿಯನ್ನುಮಾಡಿದ್ದಾರೆ.

ಪ್ರಕರಣದ ಹಾಲಿ ಸ್ಟೇಟಸನ್ನು RCCMS (https://rccms.karnataka.gov.in) ನಲ್ಲಿ ತಿಳಿದುಕೊಳ್ಳಬಹುದು.ಸಾರ್ವಜನಿಕರು ಸಹಕರಿಸಿದರೆ 10-20 ವರ್ಷಗಳ ಬಾಕಿಪ್ರಕರಣಗಳನ್ನು ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡು 4-5 ತಿಂಗಳುಗಳಲ್ಲಿ ವಿಲೇಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ನ್ಯಾಯದಾನ ವಿಳಂಬವೂ ಸಹ ನ್ಯಾಯದ ನಿರಾಕರಣೆ ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಪ್ರಕರಣಗಳ ವಿಲೇಗೆ ಸಾರ್ವಜನಿಕರು ವರ್ಷಗಳಿಂದ ಕಾಯುತ್ತಿದ್ದು ಇದು ಸರ್ಕಾರದ ಕಾರ್ಯನಿರ್ವಹಣೆ ಮೇಲೆ ಜನರ ವಿಶ್ವಾಸವನ್ನು ಕುಂದಿಸಿರುತ್ತದೆ. ನ್ಯಾಯದಾನ ವಿಳಂಬವಾಗುವುದರಿಂದ ಭೂ ವ್ಯಾಜ್ಯಗಳು ಹೆಚ್ಚಾಗುತ್ತದೆ. ಅಲ್ಲದೆ ಭೂಮಿಯ ಮಾಲಿಕತ್ವ ಗೊಂದಲದ ಗೂಡಾಗಿನೆಮ್ಮದಿಯ ಜೀವನಕ್ಕೆ ಕಂಟಕವಾಗುತ್ತದೆ. ಇವುಗಳನ್ನು ನಿವಾರಿಸಿ, ಜನಗಳಿಗೆ ಕಾಲ ಮೀತಿಯಲ್ಲಿ ನ್ಯಾಯ ಒದಗಿಸಿ, ವಿಳಂಬ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಆಡಳಿತ ಸುಧಾರಣೆಗೊಳಿಸಿ, ಜನಪರ ಆಡಳಿತ ಒದಗಿಸುವ ಕ್ರಮವಾಗಿದೆ.

ಭೂವ್ಯಾಜ್ಯಗಳಿಂದ ಭೂ ಗ್ಯಾರಂಟಿಯ ಕಡೆಗೆ ಸಾಗಲು ಈ ಹತ್ತಾರು ವರ್ಷಗಳ ಬಾಕಿ ಪ್ರಕರಣಗಳ ವಿಲೇ ಜನಗಳಿಗೆ ಸಹಾಯವಾಗುವುದರಿಂದ, ವಿಚಾರಣೆ ಹಂತದಲ್ಲಿ ಭಾಗವಹಿಸಿ ಸಹಕರಿಸುವುದು ಅತ್ಯಗತ್ಯ ಹಾಗೂ ವಿಶೇಷ ಜಿಲ್ಲಾಧಿಕಾರಿಗಳ ಈ ಜವಾಬ್ದಾರಿಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕುಎಂದು ಸೂಚಿಸಿದರು.

ಮೇ.5ರಿಂದ ಸಿಎಎ ವಿರೋಧಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

Share. Facebook Twitter LinkedIn WhatsApp Email

Related Posts

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM2 Mins Read

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM1 Min Read

ಮೇ.5ರಿಂದ ಸಿಎಎ ವಿರೋಧಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

19/02/2026 5:12 PM1 Min Read
Recent News

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

19/02/2026 5:27 PM

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM

ಮೇ.5ರಿಂದ ಸಿಎಎ ವಿರೋಧಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

19/02/2026 5:12 PM
State News
KARNATAKA

ಜಾಗತಿಕ ‘ಸ್ವಾನ್’ (SWAN) ಹಿರಿಯ ಸಲಹಾ ಸಮಿತಿಗೆ BWSSB ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಆಯ್ಕೆ

By kannadanewsnow0919/02/2026 5:27 PM KARNATAKA 2 Mins Read

ಲಂಡನ್ / ಬೆಂಗಳೂರು : ಸ್ಮಾರ್ಟ್ ವಾಟರ್ ವಲಯದ ಜಾಗತಿಕ ಸಂಸ್ಥೆಯಾದ ‘ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಮ್’ (SWAN), ತನ್ನ…

‘ನೋಂದಣಿ ಮಾಡದ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ: ಕರ್ನಾಟಕದ ಹಕ್ಕಿ ಪಿಕ್ಕಿ ಜನಾಂಗದ 26 ಮಂದಿ ಘಾನಾದಲ್ಲಿ ಅರೆಸ್ಟ್

19/02/2026 5:23 PM

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಬಾಕಿಪ್ರಕರಣಗಳ ವಿಲೇಗೆ ಮಹತ್ವದ ಹೆಜ್ಜೆ

19/02/2026 5:16 PM

ಮೇ.5ರಿಂದ ಸಿಎಎ ವಿರೋಧಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭ

19/02/2026 5:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.