ಬೆಂಗಳೂರು : ನಿರ್ಮಾಪಕ ಸಾರಾ ಗೋವಿಂದು ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಫೋನ್ ನಂಬರ್ ಹ್ಯಾಕ್ ಮಾಡಿದ ಹ್ಯಾಕರ್ಸ್ ಗಳು ಸಾರಾ ಗೋವಿಂದು ಅವರ ಕಾಂಟಾಕ್ಟ್ ನಲ್ಲಿ ಇದ್ದವರಿಗೆ 45 ಸಾವಿರ ಕಳುಹಿಸಲು ಮೆಸೇಜ್ ಮಾಡಿದ್ದಾರೆ.
ಹೌದು ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ಮಾಪಕ ಸಾರಾ ಗೋವಿಂದ ಅವರ ಫೋನ್ ಅನ್ನು ಹ್ಯಾಕ್ ಮಾಡಿದ್ದಾರೆ.ಅಲ್ಲದೆ ಅವರ ಮೊಬೈಲ್ ನಲ್ಲಿ ಇರುವ ಎಲ್ಲಾ ಕಾಂಟಾಕ್ಟ್ ಗಳ ನಂಬರ್ ಗಳಿಗೆ ಮೆಸೇಜ್ ಮಾಡಿ 45,000 ಹಣ ಹಾಕುವಂತೆ ಮೆಸೇಜ್ ಮಾಡಿದ್ದಾರೆ. ಈ ಕುರಿತು ನಿರ್ಮಾಪಕ ಸಾರಾಗುವ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಹ್ಯಾಕರ್ಸ್ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ








