ಕಲಬುರ್ಗಿ : ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿಯ ವೇಳೆ ಇಬ್ಬರು ಕಾನ್ಸ್ಟೇಬಲ್ ಗಳು ಸೇರಿದಂತೆ 9 ಜನರು ಪರಾರಿಯಾಗಿದ್ದಾರೆ. ಕಲ್ಬುರ್ಗಿಯ ಎಂ ಬಿ ನಗರ ಠಾಣೆ ಕಾನ್ಸ್ಟೇಬಲ್ ಗುರುನಾಥ್ ನಗರ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೇಬಲ್ ಮಡಿವಾಳಪ್ಪ ಪರಾರಿಯಾಗಿದ್ದಾರೆ.
ದಿಗ್ಗಾವ್ ಹೊರವಲಯದ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ದಿಗ್ಗವ್ ಗ್ರಾಮದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಇಬ್ಬರು ಕಾನ್ಸ್ಟೇಬಲ್ ಗಳು ಸೇರಿ 12 ಜನ ಇಸ್ಪೀಟ್ ಆಡುತ್ತಿದ್ದರು. ಚಿತಾಪುರ ಪೊಲೀಸರ ದಾಳಿಯ ವೇಳೆ 9 ಜೂಜು ಕೊರರು ಪರಾರಿಯಾಗಿದ್ದಾರೆ.
ಮೂವರು ಜೂಜುಕೋರರನ್ನು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಕಾನ್ಸ್ಟೇಬಲ್ ಗಳು ಜೂಜಾಟದಲ್ಲಿ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಮಡಿವಾಳಪ್ಪ ಕಲ್ಬುರ್ಗಿಯಿಂದ ಕಾರಲ್ಲಿ ದಿಗ್ಗಾಂವ್ ಗೆ ಬಂದು ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರ ದಾಳಿ ವೇಳೆ ಮಡಿವಾಳಪ್ಪ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಚಿತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








