ಬೆಂಗಳೂರು : ಬೆಂಗಳೂರಿನ ಕಸವನ್ನು ದೊಡ್ಡಬಳ್ಳಾಪುರಕ್ಕೆ ನಿಯಮ ಬಾಹಿರವಾಗಿ ಸಾಗಿಸಲಾಗುತ್ತಿದೆ ಎನ್ನುವ ಬಿಜೆಪಿ ಶಾಸಕರ ಆರೋಪಕ್ಕೆ, ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದು, ಬಿಜೆಪಿ ನಾಯಕರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ವಿಜಯೇಂದ್ರ, ಆರ್ ಅಶೋಕ್ ಮನೆ ಮುಂದೇನೆ ಕಸ ಹಾಕಿಸ್ತೀನಿ ಎಂದು ಡಿಕೆ ಶಿವಕುಮಾರ್ ಮಾರ್ನಿಂಗ್ ನೀಡಿದರು.
ಈ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಎಲ್ಲಾ ಶಾಸಕರು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ. ಗೌರವದಿಂದ ಇದ್ರೆ ಸರಿ, ಇಲ್ಲದಿದ್ರೆ ಎಸ್ಮಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತೆ. ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸಬೇಕಾಗುತ್ತೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ಕೊಟ್ಟರು.
ಕಸ ಎಲ್ಲಾದ್ರೂ ಒಂದು ಕಡೆ ಹಾಕಬೇಕಲ್ವಾ? ಅಲ್ಲೂ ಬೇಡ, ಇಲ್ಲೂ ಬೇಡ ಅಂದ್ರೆ ಎಲ್ಲಿಗೆ ಹೋಬೇಕು? ಈ ಕಸ ಅಶೋಕ್ ಮನೆಗೆ, ವಿಜಯೇಂದ್ರ ಮನೆಗೆ ಅಥವಾ ಬಿಜೆಪಿ ಆಫೀಸಿಗೆ ಹೋಗಬೇಕು. ನಿನ್ನೆ ಲಿಂಬಾವಳಿ ಪ್ರತಿಭಟನೆ ಮಾಡಿದ್ದಾರೆ, ಇವತ್ತು ಅವನು ದೊಡ್ಡಬಳ್ಳಾಪುರ ಎಂಎಲ್‌ಎ ಮಾಡಿದ್ದಾನೆ. ಇವರೆಲ್ಲ ತಮ್ಮ ಕ್ಷೇತ್ರಕ್ಕೆ ಅನುದಾನ ಬೇಕು ಅಂತ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ. ಸುಮ್ಮನೆ ಇರಲಿಲ್ಲ ಅಶೋಕ್, ವಿಜಯೇಂದ್ರ ಮನೆ ಮುಂದೆನೇ ಕಸ ಹಾಕಿಸ್ತೀನಿ, ಅಥವಾ ಬಿಜೆಪಿ ಕಚೇರಿ ಮುಂದೆಯೇ ಕಸ ಹಾಕಿಸ್ತೀನಿ ಎಂದು ವಾರ್ನಿಂಗ್ ಕೊಟ್ಟರು.








