ತುಮಕೂರು : ತುಮಕೂರಿನಲ್ಲಿ ಬೆಳ್ಳಂ ಬೆಳಗ್ಗೆ ಸರಗಳ್ಳರು ಅಟ್ಟಹಾಸ ಮೆರೆದಿದ್ದು ವೃದ್ಧೆಯ ಕತ್ತಿನಲ್ಲಿ ಇದ್ದ ಚಿನ್ನದ ಸರಕದ್ದು ಪರಾರಿಯಾಗಿರುವ ಘಟನೆ ತುಮಕೂರಿನ ಮೈದಾಳ ರಸ್ತೆಯಲ್ಲಿ ನಡೆದಿದೆ.
ಬೆಳಿಗ್ಗೆ 6:30ಕ್ಕೆ ಈ ಒಂದು ಘಟನೆ ನಡೆದಿದೆ ತುಮಕೂರಿನ ಮೈದಾಳ ರಸ್ತೆಯಲ್ಲಿ ವೃದ್ದೆ ಚಿಲ್ಲರೆ ಅಂಗಡೇ ಇಟ್ಟು ವ್ಯಾಪಾರ ಮಾಡುತ್ತಿದ್ದರು. ಗುಟ್ಕಾ ಕೇಳೋ ನೆಪದಲ್ಲಿ ಬಂದು ಏಕಾಏಕಿ ವೃದ್ದೆಯ ಕತ್ತಿಗೆ ಕೈ ಹಾಕಿ ಚಿನ್ನದ ಸರವನ್ನು ಕಿತ್ತು ಅಲ್ಲಿಂದ ಪರಾರಿಯಾಗಿದ್ದಾರೆ. ಬೆಳಗ್ಗೆ ಆದುದರಿಂದ ವೃದ್ದೆ ಪಾರ್ವತಮ್ಮ ಎಷ್ಟೇ ಕೂಗಾಡಿದರು ಅಲ್ಲಿ ಯಾರು ಜನ ಇರಲಿಲ್ಲ.








