ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂ ಬೆಳಿಗ್ಗೆ ಖಾಸಗಿ ಬಸ್ ಒಂದು ಹೊತ್ತಿ ಉರಿದಿದೆ. ಇಂದು ಬೆಳಿಗ್ಗೆ 10: 30ಕೆ ಈ ಒಂದು ಘಟನೆ ನಡೆದಿದ್ದು ಚಂದ್ರಾ ಲೇಔಟ್ ಬಿಎಂಟಿಸಿ ಒಂದು ಘಟನೆ ನಡೆದಿದೆ. ಅದೃಷ್ಟ ವಸಾದ್ ಬಸ್ ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.
ಸಂಪೂರ್ಣವಾಗಿ ಬಸ್ ಹೊತ್ತಿ ಉರಿದಿದೆ. ಕೆಲಕಾಲ ಸ್ಥಳೀಯರಲ್ಲಿ ಆತಂಕ ಮನೆ ಮಾಡಿತ್ತು. ಚಂದ್ರ ಲೇಔಟ್ ಬಿಎಂಟಿಸಿ ಡಿಪೋ ಬಳಿ ಒಂದು ಘಟನೆ ನಡೆದಿದ್ದು, ಆದರೆ ಕಾರಣ ಏನು ಎಂಬುದು ಇದುವರೆಗೂ ಗೊತ್ತಾಗಿಲ್ಲ. ಈ ಒಂದು ಖಾಸಗಿ ಬಸ್ ಯಾರಿಗೆ ಸೇರಿದೆ ಎಂಬುದು ತಿಳಿದು ಬಂದಿಲ್ಲ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.








