ಕೋಲಾರ : ಜಾಗತಿಕ ಮಟ್ಟದ ಎಕೋ ಸಿಸ್ಟಮ್ ನಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ಕೋಲಾರ ತಾಲೂಕಿನ ವೇಮಗಲ್ ನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೋದ್ಯಮ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಭಾರತದ ಏರೋ ಸ್ಪೇಸ್ ನಲ್ಲಿ 65 ರಷ್ಟು ಕರ್ನಾಟಕದ ಕೊಡುಗೆ ಇದೆ ಏರೋ ಸ್ಪೇಸ್ ಜೊತೆಗೆ ವಿವಿಧ ಕಂಪನಿಗಳ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ ಬೆಂಗಳೂರು ಕೋಲಾರ ಸೇರಿದಂತೆ ಹಲವಡೆ ಡಿಫೆನ್ಸ್ ಕಾರಿಡಾರ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ವೆಮಗಲ್ ನಲ್ಲಿ ಖಾಸಗಿ ಹಲಿಕ್ಯಾಪ್ಟರ್ ಉತ್ಪಾದನಾ ಘಟಕ ಶುರುವಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಮತ್ತಷ್ಟು ಕೈಗಾರಿಕೆಗಳು ಬರಲಿವೆ ಎಂದು ಸಚಿವ ಎಂಬ ಪಟೇಲ್ ಹೇಳಿಕೆ ನೀಡಿದರು.








