ಬಳ್ಳಾರಿ : ಸಾರ್ವಜನಿಕ ಸ್ಥಳವಾಗಲೀ, ಅದು ಯಾವುದೇ ಪ್ರದೇಶವಾಗಿರಲಿ, ಕೆಲವರು ರೀಲ್ಸ್ ಮಾಡೋದನ್ನು ಮಾತ್ರ ಬಿಡೋದಿಲ್ಲ. ಹೀಗೆ ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಕ್ಕೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಅದು ಎಲ್ಲಿ? ಏಕೆ ಎನ್ನುವ ಬಗ್ಗೆ ಮುಂದೆ ಓದಿ.
ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸರಿಂದ ವಿಶ್ವನಾಥ್(29) ಎಂಬಾತನನ್ನು ಬಂಧಿಸಲ್ಪಟ್ಟಿದ್ದಾರೆ. ಕಾರಣ, ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿದ್ದಕ್ಕೆ. ಹೌದು ದುರ್ಗಮ್ಮ ದೇಗುಲ ಬಳಿ ರೈಲು ಸೇತುವೆ ಮೇಲೆ ನಿಂತು ಡ್ಯಾನ್ಸ್ ಮಾಡಿ, ರೀಲ್ಸ್ ಮಾಡುತ್ತಾ ವಿಶ್ವನಾಥ್ ಹುಚ್ಚಾಟ ಮೆರೆದಿದ್ದನು.
ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದಕ್ಕಾಗಿ ಸಾರ್ವಜನಿಕರು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಂತ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕ ವಿಶ್ವನಾಥ್ ಮೂಲತಹ ಉತ್ತರ ಪ್ರದೇಶದವನು. ಸಾರ್ವಜನಿಕ ಸ್ಥಳದಲ್ಲಿ, ಅಪಾಯ ಕಾರಿ ಪ್ರದೇಶದಲ್ಲಿ ರೀಲ್ಸ್ ಮಾಡುವುದು ಅಪರಾಧ. ಈ ಹಿನ್ನಲೆಯಲ್ಲೇ ಯುವಕ ವಿಶ್ವನಾಥ್ ನನ್ನು ಪೊಲೀಸರು ಬಂಧಿಸಿ, ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಸಾವು








