ಬೆಳಗಾವಿ : ಕರ್ನಾಟಕ ಗೋವಾ ಗಡಿಯಲ್ಲಿ 400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ SIT ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದ್ದು, 400ಕೋಟಿ ದರೋಡೆ ಆಗಿದೆ ಎಂಬುದೇ ಸುಳ್ಳು ಎಂದು ಮಹಾರಾಷ್ಟ್ರ ಎಸ್ಐಟಿ ತನಿಖೆಯಲ್ಲಿ ವರದಿ ಬಹಿರಂಗವಾಗಿದೆ.
ಹೌದು 400 ಕೋಟಿ ದರೋಡೆ ಪ್ರಕರಣದ ತನಿಖೆಗೆ ಮಹಾರಾಷ್ಟ್ರ ಸರ್ಕಾರ ಎಸ್ಐಟಿ ರಚಿಸಿತ್ತು. ಒಂದು ತಿಂಗಳ ಕಾಲ ಎಸ್ಐಟಿ ಅಧಿಕಾರಿಗಳು ಈ ಒಂದು ಪ್ರಕರಣದ ತನಿಖೆ ನಡೆಸಿದ್ದರು. ಚೋರ್ಲ ಘಾಟ್ ಬಳಿ ಯಾವುದೇ ದರೋಡೆ ನಡೆದಿಲ್ಲ ಎಂದು ವರದಿ ಬಂದಿದೆ ಎಂದು ಸಂದೀಪ್ ಪಾಟೀಲ್ ನಾಸಿಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೀಗ ದೂರುದಾರ ಸಂದೀಪ್ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಕೃತ್ಯದ ಸ್ಥಳ, ಸಮಯ ಕರೆ ವಿವರದ ನಿಖರ ಮಾಹಿತಿ ಲಭ್ಯವಾಗಿಲ್ಲ. ಚೋರ್ಲ ಘಾಟ್ ನಲ್ಲಿ ದರೋಡೆ ನಡೆದಿಲ್ಲವೆಂದು ಎಸ್ಐಟಿ ವರದಿ ಸಲ್ಲಿಸಿದೆ. ಸಾಕ್ಷಿ ಕೊರತೆಯಿಂದಾಗಿ ಆರೋಪಿಗಳ ಬಿಡುಗಡೆಗೆ ಕೋರ್ಟ್ ಆದೇಶ ಹೊರಡಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಈ ಒಂದು 400 ಕೋಟಿ ದರೋಡೆ ಪ್ರಕರಣ ಸಂಚಲನ ಸೃಷ್ಟಿಸಿತ್ತು ದೂರು ನೀಡಿದ ಸಂದೀಪ್ ಪಾಟೀಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಇದೀಗ ಮಹಾರಾಷ್ಟ್ರದ ನಾಸಿಕ್ ಪೊಲೀಸರು ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.








