ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ನಾನು ಇದ್ದೇನೆ. ಯಾವುದೇ ಕಾರಣಕ್ಕೂ ಯಾರನ್ನೂ ತೆರವುಗೊಳಿಸೋದಿಲ್ಲ. ಕೆಪಿಸಿ ಭೂಮಿ ಇರಲಿ, ಅರಣ್ಯ ಭೂಮಿ ಆದರೂ ಸರಿಯೇ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಇಂದು ಹೇಳಿದ್ದರು. ಆ ಮೂಲಕ ಯಡಮನೆ ಜನರ ಬೆನ್ನಿಗೆ ನಿಂತಿದ್ದರು. ಇಂತಹ ಶಾಸಕರ ಇಂದಿನ ಹೇಳಿಕೆಯನ್ನು ಶರಾವತಿ ನದಿ ದಂಡೆ ರೈತರು ಸ್ವಾಗತಿಸುತ್ತೇವೆ ಎಂಬುದಾಗಿ ಕೆಡಿಪಿ ಸದಸ್ಯ, ಕಾಂಗ್ರೆಸ್ ಮುಖಂಡ ಜಿ.ಟಿ ಸತ್ಯನಾರಾಯಣ ಅವರು ತಿಳಿಸಿದ್ದಾರೆ.
ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವಂತ ಜಿ.ಟಿ ಸತ್ಯನಾರಾಯಣ ಅವರು, ಶರಾವತಿ ಸಂತ್ರಸ್ತರ ಭೂಮಿ ಸಮಸ್ಯೆ ಅಂದರೆ ಇಲ್ಲಿಂದ ಮುಳುಗಡೆ ಆಗಿ ಅನಿವಾರ್ಯವಾಗಿ ಬೇರೆ ಕಡೆ ಹೋದವರ ಸಮಸ್ಯೆ ಎನ್ನುವುದು ಇಲ್ಲಿಯ ತನಕ ಸರ್ಕಾರ ನೋಟ ಆಗಿದೆ. ವಾಸ್ತವದಲ್ಲಿ ಮುಳುಗಡೆ ಆಗದೇ ಉಳಿದ ನದಿ ದಂಡೆಯಲ್ಲಿ 10-12 ಸಾವಿರ ಕುಟುಂಬ ಕೃಷಿ ಮಾಡಿಕೊಂಡು ಬದುಕಿವೆ… ಅವರಿಗೆ ಭೂಮಿ ಹಕ್ಕು ನೀಡಬೇಕು ಎಂದಿದ್ದಾರೆ.
2024 ರ ಲಿಂಗನಮಕ್ಕಿ ಚಲೋ ಹೊತ್ತಿನಲ್ಲಿ ನಾವು ಈ ಬೇಡಿಕೆ ಮುಂದಕ್ಕೆ ಇಟ್ಟಿದ್ದೆವು. ಈಗ ಈ ಬೇಡಿಕೆ ಸಂಘಟಿತ ದ್ವನಿ ಆಗಿ ಇನ್ನಷ್ಟು ಮೊನ್ನೆಲೆಗೆ ಬಂದಿದೆ. ಈಶ್ವರ್ ಖಂಡ್ರೆಯವರ ಈಚೆ ಟಿಪ್ಪಣಿ ರೈತರನ್ನ ಆತಂಕಕೆ ಕಾರಣ ಆಗಿತ್ತು ಎಂದು ಹೇಳಿದ್ದಾರೆ.
ಈ ಹೊತ್ತಿನಲ್ಲಿ ನಮ್ಮ ನಾಯಕರಾದ ಬೇಳೂರು ಈ ರೈತರ ಪರವಾಗಿ ನಿಂತಿರುವುದು ಸ್ವಾಗತ. ಸಾಗರ ಮತ್ತು ಹೊಸನಗರ ಭಾಗದ ಈ ರೈತರಿಗೆ ಭೂಮಿ ಹಕ್ಕಿನ ಶಾಸನಾತ್ಮಕ ಪರಿಹಾರಕೆ ಬೇಳೂರು ಸರ್ ಮುಂದಾಗಬೇಕು ಎನ್ನುವುದು ಕೆ ಪಿ ಸಿ ರೈತರ ಕೋರಿಕೆ ಆಗಿದೆ. ಈ ಹಿಂದಿನ ಕೆ ಡಿ ಪಿ ಸಭೆಯಲ್ಲಿ ನಾನು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ ಎಂಬುದಾಗಿ ತಿಳಿಸಿದ್ದಾರೆ.
ಎಡಮನೆ ರೈತರ ಪರ ಸರ್ಕಾರ ನಿಲುವು ತೆಗೆದುಕೊಂಡಿದ್ದು ಮತ್ತು ಮಾನ್ಯ ಶಾಸಕರ ಇಂದಿನ ಈ ಹೇಳಿಕೆಯನ್ನ ಶರಾವತಿ ನದಿ ದಂಡೆ ರೈತರು ಸ್ವಾಗತಿಸುತ್ತೇವೆ ಎಂಬುದಾಗಿ ಜಿ.ಟಿ ಸತ್ಯನಾರಾಯಣ ಕರೂರು ಹೇಳಿದ್ದಾರೆ.
ಶಾಸಕ ಭೈರತಿ ಬಸವರಾಜ್ ಮನೆಗೆ ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ








