ಬೆಂಗಳೂರು : ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತ ದೇಹ ಒಂದು ಪತ್ತೆಯಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ.
ಡ್ಯಾಮ್ ನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ಪ್ರವಾಸಿಗರು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಘಟನೆ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಕೂಡ ಭೇಟಿ ನೀಡಿದ್ದಾರೆ ಪಶು ವೈದ್ಯರಿಂದ ಸ್ಥಳದಲ್ಲಿಯೇ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಮೃತ ದೇಹದ ಸ್ಯಾಂಪಲ್ ಅನ್ನು ಅರಣ್ಯ ಸಿಬ್ಬಂದಿಗಳು ಸಂಗ್ರಹಿಸಿದ್ದಾರೆ. ಬಳಿಕ FSL ಲ್ಯಾಬ್ ಗೆ ಸ್ಯಾಂಪಲ್ ಕಳುಹಿಸಿದ್ದಾರೆ.








