ಮಂಡ್ಯ : ಮಂಡ್ಯದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘೋರ ಘಟನೆ, ಮಂಡ್ಯದ ಬಸರಾಳು ಸಮೀಪದ ಕಾರೆಕಟ್ಟೆಯ ಬಳಿಯ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಸಂಭವಿಸಿದೆ.
ಕಾರೆಕಟ್ಟೆಯಿಂದ ಬೇರೆ ಕಡೆಗೆ ಕಾರ್ಖಾನೆಯನ್ನು ಶಿಫ್ಟ್ ಮಾಡಲಾಗುತ್ತಿತ್ತು. ಬಿಹಾರ ಮೂಲಕ ಕಾರ್ಮಿಕರಿಂದ ಕಾರ್ಖಾನೆ ಸ್ಥಳಾಂತರ ಕಾರ್ಯ ನಡೆಯುತ್ತಿತ್ತು. ಕಳೆದ ಒಂದು ತಿಂಗಳಂದಲೂ ಸ್ಥಳಾಂತರದ ಕೆಲಸ ನಡೆಯುತ್ತಿತ್ತು. ಇಂದು ರಾಸಾಯನಿಕ ಟ್ಯಾಂಕ್ ತೆರವು ಮಾಡುತ್ತಿದ್ದ ಕಾರ್ಮಿಕರು, ಈ ವೇಳೆ ಟ್ಯಾಂಕ್ಸ್ ಸ್ಪೋಟಗೊಂಡು ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದೇ ಕಾರ್ಖಾನೆಯಲ್ಲಿ ನಾಲ್ಕು ವರ್ಷಗಳ ಹಿಂದೆಯೂ ಕೂಡ ಅವಘಡ ಸಂಭವಿಸಿತ್ತು. ರಾಸಾಯನಿಕ ಸೋರಿಕೆಯಾಗಿ ನೂರಾರು ಎಕರೆ ಬೆಳೆ ಹಾನಿಯಾಗಿತ್ತು. ಅಲ್ಲದೆ ರಾಸಾಯನಿಕ ಸೋರಿಕೆ ಇಂದ ಎರಡು ನಾಯಿಗಳು ಮೃತಪಟ್ಟಿದ್ದವು. ಬಳಿಕ ಕಾರ್ಖಾನೆ ಆರಂಭಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾನಿಯಾದ ಬೆಳಿಗ್ಗೆ ಮಂಡ್ಯ ಜಿಲ್ಲಾ ಆಡಳಿತ ಪರಿಹಾರ ಕೊಡಿಸಿತ್ತು. ಹೀಗಾಗಿ ಕಾರ್ಖಾನೆ ಮಾಲಿಕ ಬೇರೆ ಕಾರ್ಖಾನೆ ಸ್ಥಳಾಂತರ ಮಾಡಿಸುತ್ತಿದ್ದ. ಮುಂಜಾಗ್ರತ ಕ್ರಮ ತೆಗೆದುಕೊಳ್ಳದೆ ಇದ್ದಿದ್ದರಿಂದ ಇದೀಗ ಮತ್ತೆ ದುರಂತ ಸಂಭವಿಸಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








