ಮಂಡ್ಯ : ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕು ಡಿಕೆ ಶಿವಕುಮಾರ್ ಸಿಎಂ ಆಗೋದನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಶಾಸಕ ಗಣಿಗ ರವಿಕುಮಾರ್ ಬ್ಯಾಟಿಂಗ್ ಬೀಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿಕೆ ಶಿವಕುಮಾರ್ ಗೆ ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಇದೆ. ಯಾವಾಗ ಯಾವ ಪ್ಲಾನ್ ಮೂವ್ ಮಾಡಿದರೆ ಗೇಮ್ ಗೆಲ್ಲಬಹುದು ಎಂದು ಗೊತ್ತಿದೆ. ಬುದ್ಧಿವಂತಿಕೆ ಇರುವುದಕ್ಕೆ ಸೈಲೆಂಟಾಗಿ ಕಾಯಿನ್ ಮೂವ್ ಮಾಡುತ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು ಆಟ ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಮ್ ಅಲ್ಲ ಬಲಿಷ್ಠ ಭಾರತ ಟೀಂ. ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಡಿಕೆ ಶಿವಕುಮಾರ್ ಗೆ ಇದೆ. ಪ್ರಶ್ನೆಗಳಿಗೆ ಅತಿ ಶೀಘ್ರದಲ್ಲಿ ಉತ್ತರ ಬರಲಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆಯ ವಿಚಾರವಾಗಿ ಯತಿಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಎಂದು ಗಣಿಗ ರವಿಕುಮಾರ್ ವ್ಯಂಗ್ಯವಾಡಿದರು. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು ಆದರೆ ಹೈಕಮಾಂಡ್ಗೆ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ. ಯತೀಂದ್ರ ನಮ್ಮ ಹೈಕಮಾಂಡ್ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ನಾನು ಅದನ್ನೇ ಹೇಳುತ್ತೇನೆ.
ಯತೀಂದ್ರ ನಮ್ಮ ಹೈಕಮಾಂಡ ಅನ್ನೋದನ್ನ 100% ಒಪ್ಪಿಕೊಳ್ಳುತ್ತೇನೆ. ಯಾರು ಸ್ಟೇಟ್ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದರು. ಆದರೂ ಸ್ಟೇಟ್ಮೆಂಟ್ ಕೊಡುತ್ತಿದ್ದಾರೆ ಅಂದರೆ ಅವರೇ ಸುಪ್ರೀಂ ಖರ್ಗೆ ಗಿಂತ ಜಾಸ್ತಿನಾ ಅಥವಾ ಡಿಕೆಗಿಂತ ಕಡಿಮೆ ಅಂತ ಹೇಳಲು ಆಗಲ್ಲ. ಬೇಡ ಅಂದರೂ ಮಾತನಾಡುತ್ತಿದ್ದಾರೆ ಅಂದರೆ ಪವರ್ ಫುಲ್ ಮ್ಯಾನ್ ಎಂದು ಆಕ್ರೋಶ ಹೊರ ಹಾಕಿದರು.








