Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BREAKING NEWS

BREAKING : ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ : `KSRTC’ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು !

15/02/2026 5:55 AM

BIG NEWS : ರಾಜ್ಯದಲ್ಲಿ ಈ ಬಾರಿ ಬರುತ್ತಲಿದೆ `ಬಿರುಬಿಸಿಲಿನ ಬೇಸಿಗೆ’ : ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ !

15/02/2026 5:50 AM

ರಾಜ್ಯದ `KSRTC’ ನೌಕರರು ತಿಂಗಳ ಮೊದಲ ಶನಿವಾರ `ಖಾದಿ ಉಡುಪು’ ಧರಿಸುವುದು ಕಡ್ಡಾಯ !

15/02/2026 5:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ ಈ ಬಾರಿ ಬರುತ್ತಲಿದೆ `ಬಿರುಬಿಸಿಲಿನ ಬೇಸಿಗೆ’ : ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ !
KARNATAKA

BIG NEWS : ರಾಜ್ಯದಲ್ಲಿ ಈ ಬಾರಿ ಬರುತ್ತಲಿದೆ `ಬಿರುಬಿಸಿಲಿನ ಬೇಸಿಗೆ’ : ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ !

By kannadanewsnow5715/02/2026 5:50 AM

ಬೆಂಗಳೂರು : ತೀವ್ರ ಚಳಿಗೆ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೇಸಿಗೆಗೂ ಮುನ್ನವೇ ರಣಬಿಸಿಲು ಜನರನ್ನು ಸುಡುತ್ತಿದೆ. ತಾಪಮಾನ 30 ಡಿಗ್ರಿ ಸೆ.ಮೀರಿದೆ.

ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ಚಳಿಯಿಂದ ನಡುಗುತ್ತಿದ್ದ ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ. ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವರಾತ್ರಿಗೆ ಶಿವ ಶಿವ ಎಂದು ಚಳಿ ಹೋಗುವ ಮುನ್ನವೇ ರಾಜ್ಯದಲ್ಲಿ ಬಿರು ಬಿಸಿಲಿನ ಆರ್ಭಟ ಜೋರಾಗಿದೆ. ರಾಜ್ಯದಲ್ಲಿ ಈ ಬಾರಿಯಬೇಸಿಗೆಯಲ್ಲಿ ನೇಸರ ಉಗ್ರ ಪ್ರತಾಪ ತೋರುವ ಲಕ್ಷಣಗ ಳಿವೆ. ಸದ್ಯ, ಉತ್ತರ ಕರ್ನಾಟಕ ಭಾಗದ ಲ್ಲಷ್ಟೇ ಅಲ್ಲ, ಕರಾವಳಿ, ಬೆಂಗಳೂರಿನಲ್ಲೂ ಬಿಸಿಲಿನ ಝಳ ಅಧಿಕವಾಗಲಿದ್ದು ಜನ ಬಸವಳಿಯಲಿದ್ದಾರೆ. ವಿಶೇಷವಾಗಿ ಏಪ್ರಿಲ್-ಮೇ ತಿಂಗಳಿ ನಲ್ಲಂತೂ ರಾಜ್ಯದಲ್ಲಿ ಬಿಸಿಲಿನ ಆರ್ಭಟ ಇನ್ನೂ ಅಧಿಕವಾಗಲಿದೆ.

ಪ್ರಸ್ತುತ ಬೆಂಗಳೂರಿನಲ್ಲಿ 30 ರಿಂದ 31 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಏಪ್ರಿಲ್-ಮೇ ತಿಂಗಳಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ದಾಟಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಸದ್ಯ 34 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಏಪ್ರಿಲ್-ಮೇ ಮಾಹೆಯಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗೆಮುಟ್ಟಲಿದೆ. ಅದರಲ್ಲೂ ಕಲಬುರಗಿಯಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ದಾಟಬಹುದು’ ಎಂದು ಹವಾ ಮಾನ ತಜ್ಞಸಿ.ಎಸ್.ಪಾಟೀಲ್‌ ತಿಳಿಸಿದ್ದಾರೆ.

ಬೀದರ್, ಕಲಬುರಗಿ, ಯಾದಗಿರಿ, ವಿಜಯ ಪುರ, ರಾಯಚೂರು, ಕೊಪ್ಪಳ, ಗದಗ, ಬಾಗ ಲಕೋಟೆ. ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಏಪ್ರಿಲ್ -ಮೇ ತಿಂಗಳಿನಲ್ಲಿ ಉಷ್ಣಾಂಶ ವಾಡಿಕೆಗಿಂತ ಬಹಳಷ್ಟು ಅಧಿಕವಾಗಲಿದೆ. ಬೆಂಗಳೂರಿನಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ವರೆಗೂ ಹೋಗಬಹುದು. ಕರಾವಳಿ ಜಿಲ್ಲೆಗಳಾದ ಮಂಗ ಳೂರು, ಉಡುಪಿ, ಕಾರವಾರಗಳಲ್ಲಿ 38 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಬಹುದು ಎಂದು ಅವರು ಅಂದಾಜಿಸಿದ್ದಾರೆ.

ಬೇಸಿಗೆಯಲ್ಲಿ ಇರಲಿ ಈ ಮುನ್ನೆಚ್ಚರಿಕೆ

ಬೇಸಿಗೆಯಲ್ಲಿ ದೀರ್ಘಕಾಲದವರೆಗೆ ಸೂರ್ಯನ ಬೆಳಕು ಮತ್ತು ಹೆಚ್ಚಿನ ತಾಪಮಾನಕ್ಕೆ ಒಡ್ಡಿಕೊಂಡಾಗ ದೇಹದಲ್ಲಿನ ನೀರು ಕಳೆದುಹೋಗುತ್ತದೆ. ನಂತರ ದೇಹದ ಉಷ್ಣತೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಈ ಕಾರಣದಿಂದಾಗಿ ಸಿಂಪೆಥೆಟಿಕ್ ನರಮಂಡಲವು ಸಕ್ರಿಯಗೊಳ್ಳುತ್ತದೆ ಮತ್ತು ದೇಹವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ನೀರಿನ ಕೊರತೆಯಿಂದ ರಕ್ತದ ಪ್ರಮಾಣವೂ ಕಡಿಮೆಯಾಗುತ್ತದೆ. ರಕ್ತದ ದಪ್ಪವಾಗುವುದರಿಂದ, ಹೃದಯ ಮತ್ತು ಅಪಧಮನಿಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಆಗ ನಮ್ಮ ಚರ್ಮವು ಶಾಖವನ್ನು ವೇಗವಾಗಿ ಹೊರಸೂಸುತ್ತದೆ. ಈ ಪರಿಸ್ಥಿತಿಯಲ್ಲಿ ಹೆಚ್ಚು ಬೆವರುವುದಿಲ್ಲ, ಪರಿಣಾಮ ದೇಹವು ತಣ್ಣಗಾಗಲು ಸಾಧ್ಯವಾಗುವುದಿಲ್ಲ. ಇದು ಹೀಟ್ ಸ್ಟ್ರೋಕ್ ಮತ್ತು ಡಿಹೈಡ್ರೇಶನ್ಗೆ ಕಾರಣವಾಗುತ್ತದೆ.

ನಿರ್ಜಲೀಕರಣದಿಂದ ಪಾರಾಗುವುದು ಹೇಗೆ?

ಸುಡುವ ಶಾಖದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅದರಲ್ಲೂ 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಇನ್ನೂ ಹೆಚ್ಚು ಎಚ್ಚರದಿಂದಿರಬೇಕು.

ನಮ್ಮ ದೇಹದ ಹೆಚ್ಚಿನ ಭಾಗವು ನೀರಿನಿಂದ ಮಾಡಲ್ಪಟ್ಟಿದೆ. ಹಾಗಾಗಿ ನೀರಿನ ಕೊರತೆಯಿಂದ ಡಿಹೈಡ್ರೇಶನ್ ಉಂಟಾಗುತ್ತದೆ. ಇದನ್ನು ತಪ್ಪಿಸಲು ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು. ಎಳನೀರು, ನಿಂಬೆ ಪಾನಕ ಮತ್ತು ಎಲ್ಲಾ ರೀತಿಯ ತಾಜಾ ಹಣ್ಣಿನ ರಸವನ್ನು ಕುಡಿಯಬಹುದು.

ಪ್ರಖರ ಬಿಸಿಲು ಮತ್ತು ವಿಪರೀತ ತಾಪಮಾನವಿದ್ದಾಗ ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ತೀರಾ ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಹೋಗಿ. ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಡಿ. ಹತ್ತಿಯ ಸಡಿಲವಾದ ಬಟ್ಟೆಗಳನ್ನು ಧರಿಸಿ. ಟೋಪಿ, ಕ್ಯಾಪ್ ಅಥವಾ ಛತ್ರಿಯನ್ನು ಸಹ ಬಳಸಬಹುದು. ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳಿ.

a 'sunny summer' is coming to the state: Temperatures will rise even before winter ends! BIG NEWS: This time
Share. Facebook Twitter LinkedIn WhatsApp Email

Related Posts

BREAKING NEWS

BREAKING : ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ : `KSRTC’ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು !

15/02/2026 5:55 AM1 Min Read

ರಾಜ್ಯದ `KSRTC’ ನೌಕರರು ತಿಂಗಳ ಮೊದಲ ಶನಿವಾರ `ಖಾದಿ ಉಡುಪು’ ಧರಿಸುವುದು ಕಡ್ಡಾಯ !

15/02/2026 5:44 AM1 Min Read

ರಾಜ್ಯ ಸರ್ಕಾರದಿಂದ 1.1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ : ಹಾವೇರಿ ಬೃಹತ್ ಸಮಾವೇಶದಲ್ಲಿ 6ನೇ ಗ್ಯಾರಂಟಿ ಸಮರ್ಪಣೆ.!

15/02/2026 5:35 AM2 Mins Read
Recent News
BREAKING NEWS

BREAKING : ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ : `KSRTC’ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು !

15/02/2026 5:55 AM

BIG NEWS : ರಾಜ್ಯದಲ್ಲಿ ಈ ಬಾರಿ ಬರುತ್ತಲಿದೆ `ಬಿರುಬಿಸಿಲಿನ ಬೇಸಿಗೆ’ : ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ !

15/02/2026 5:50 AM

ರಾಜ್ಯದ `KSRTC’ ನೌಕರರು ತಿಂಗಳ ಮೊದಲ ಶನಿವಾರ `ಖಾದಿ ಉಡುಪು’ ಧರಿಸುವುದು ಕಡ್ಡಾಯ !

15/02/2026 5:44 AM

ರಾಜ್ಯ ಸರ್ಕಾರದಿಂದ 1.1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ : ಹಾವೇರಿ ಬೃಹತ್ ಸಮಾವೇಶದಲ್ಲಿ 6ನೇ ಗ್ಯಾರಂಟಿ ಸಮರ್ಪಣೆ.!

15/02/2026 5:35 AM
State News
BREAKING NEWS KARNATAKA

BREAKING : ರಾಜ್ಯದಲ್ಲಿ ಭೀಕರ ರಸ್ತೆ ಅಪಘಾತ : `KSRTC’ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವು !

By kannadanewsnow5715/02/2026 5:55 AM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕೆಎಸ್ ಆರ್ ಟಿಸಿ ಬಸ್ ಗೆ ಕಾರು ಡಿಕ್ಕಿಯಾಗಿ ಐವರು ಸ್ಥಳದಲ್ಲೇ…

BIG NEWS : ರಾಜ್ಯದಲ್ಲಿ ಈ ಬಾರಿ ಬರುತ್ತಲಿದೆ `ಬಿರುಬಿಸಿಲಿನ ಬೇಸಿಗೆ’ : ಚಳಿಗಾಲ ಮುಗಿಯುವ ಮುನ್ನವೇ ತಾಪಮಾನ ಏರಿಕೆ !

15/02/2026 5:50 AM

ರಾಜ್ಯದ `KSRTC’ ನೌಕರರು ತಿಂಗಳ ಮೊದಲ ಶನಿವಾರ `ಖಾದಿ ಉಡುಪು’ ಧರಿಸುವುದು ಕಡ್ಡಾಯ !

15/02/2026 5:44 AM

ರಾಜ್ಯ ಸರ್ಕಾರದಿಂದ 1.1 ಲಕ್ಷ ಜನರಿಗೆ ಹಕ್ಕುಪತ್ರ ವಿತರಣೆ : ಹಾವೇರಿ ಬೃಹತ್ ಸಮಾವೇಶದಲ್ಲಿ 6ನೇ ಗ್ಯಾರಂಟಿ ಸಮರ್ಪಣೆ.!

15/02/2026 5:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.