ಬೆಂಗಳೂರು : ಭಡ್ತಿ ನೀಡುವ ವಿಚಾರದಲ್ಲಿ ರಾಜ ಸರ್ಕಾರ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಹೌದು ರಾಜ್ಯ ಸರ್ಕಾರದಿಂದ ಇದೀಗ ಸ್ವಯಂ ನಿವೃತ್ತಿಯಾಗಿದ್ದ ಸ್ವಾಮೀಜಿಗೂ ಪ್ರಮೋಷನ್ ನೀಡಿರುವುದು ಬೆಳಕಿಗೆ ಬಂದಿದೆ.
ರಾಜ್ಯ ಸರ್ಕಾರ ಈ ಒಂದು ಎಡವಟ್ಟು ಮಾಡಿದ್ದು ಅಧಿಕಾರಿಗಳಿಗೆ ಭಡ್ತಿ ನೀಡುವ ವೇಳೆ ಸ್ವಯಂ ನಿವೃತ್ತಿಯಾಗಿದ್ದ ಸ್ವಾಮಿಜಿಗೂ ಪ್ರಮೋಷನ್ ನೀಡಿದ್ದಾರೆ. 20 ಅಧಿಕಾರಿಗಳಿಗೆ ಭಡ್ತಿ ಕೊಟ್ಟು ಸರ್ಕಾರ ಆದೇಶ ಹೊರಡಿಸಿದ್ದು, ಇದರಲ್ಲಿ ಸ್ವಯಂ ನಿವೃತ್ತಿಯಾದ ಸ್ವಾಮೀಜಿ ಹೆಸರು ಕೂಡ ಉಲ್ಲೇಖವಾಗಿದೆ.
ನಿವೃತ್ತಿಗೂ ಮೊದಲು ಮಂಡ್ಯದಲ್ಲಿ ಅಪ್ಪಾಜಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದ ಡಾಕ್ಟರ್ ಎಚ್ ಎಲ್ ನಾಗರಾಜ್ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದುಕೊಂಡು ಸ್ವಾಮೀಜಿ ಆಗಿದ್ದರು. ಭಡ್ತಿಯ ವೇಳೆ ನಿವೃತ್ತ ಪಡೆದವರನ್ನು ಪಟ್ಟಿಯಲ್ಲಿ ಸರ್ಕಾರ ಸೇರಿಸಿ ಎಡವಟ್ಟು ಮಾಡಿದೆ ಸರ್ಕಾರದ ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ವಿಶ್ವ ಒಕ್ಕಲಿಗ ಮಹಾ ಸಂಸ್ಥಾನದ ಪೀಠಾಧಿಪತಿ ನಿಶ್ಚಲಾನಂದನಾಥ ಶ್ರೀ ಗಳಿಗೂ ಇದೀಗ ಭಡ್ತಿ ನೀಡಿ ಸರ್ಕಾರ ಆದೇಶ ನೀಡಿದೆ.








