ಮೈಸೂರು : ಕಳೆದ ಕೆಲವು ದಿನಗಳಿಂದ ಮೈಸೂರಿನಲ್ಲಿ ಚಿನ್ನದ ಅಂಗಡಿಗೆ ನುಗ್ಗಿ ಚಿನ್ನಾಭರಣ ದರೋಡೆ ಪ್ರಕರಣ ನಡೆದಿತ್ತು. ಆ ಒಂದು ಘಟನೆ ಮಾದರಿಯಲ್ಲಿಯೇ ಮತ್ತೊಂದು ದರೋಡೆಯಾಗಿದ್ದು, ಪೆಟ್ರೋಲ್ ಬಂಕ್ ನಲ್ಲಿ ಐವರು ಡ್ಯಾಗರ್ ತೋರಿಸಿ ದರೋಡೆ ಮಾಡಿದ್ದಾರೆ.
ಮೈಸೂರು ಕಿರುಮುದ್ದನಹಳ್ಳಿ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಈ ಒಂದು ದರೋಡೆ ನಡೆದಿದೆ. ನಂಬರ್ ಪ್ಲೇಟ್ ಇಲ್ಲದ ಸ್ಕೋಡಾ ಕಾರಿನಲ್ಲಿ ಐವರು ಬಂದು ಈ ದುಷ್ಕೃತ ಎಸಗಿದ್ದಾರೆ. ಪೆಟ್ರೋಲ್ ಬಂಕ್ ನಲ್ಲಿ ಇದ್ದ ಇಬ್ಬರೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪೆಟ್ರೋಲ್ ಬಂಕ್ ನಲ್ಲಿ ದಿನದ ವ್ಯವಹಾರದ ನಗದು ಇಟ್ಟಿದ್ದರು. ಈ ವೇಳೆ ಡ್ಯಾಗಾರ್ ನಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ನಗದು ಹಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾತ್ರಿಯ ವೇಳೆ ಪೆಟ್ರೋಲ್ ಕೇಳಿಕೊಂಡು ಬಂದು ಈ ಒಂದು ಕೃತ್ಯ ಎಸಗಿದ್ದಾರೆ. ದರೋಡೆಕೋರರಿಗೆ ಸದ್ಯ ಪೋಲಿಸಲು ಹುಡುಕಾಟ ನಡೆಸುತ್ತಿದ್ದಾರೆ








