ಉಡುಪಿ : ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರವಾದ ಆರೋಪ ಮಾಡಿದ್ದು, ಇದರಲ್ಲಿ ನೇರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಾಗೂ ಸಚಿವ ಭೈರತಿ ಸುರೇಶ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಇವರ ಹಸ್ತಕ್ಷೇಪದಿಂದ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ಜಿಲ್ಲಾ ಮುಖಂಡರು ಸೇರಿದಂತೆ ಎಲ್ಲರೂ ರೋಸಿ ಹೋಗಿದ್ದಾರೆ. ಸಿಎಂ ಸಿದ್ದರಾಮಯ್ಯನವರು ರಾಜ್ಯದ ದೀರ್ಘಾವಧಿಯ ಸಿಎಂ ನಿಜ. ಆದರೆ ಅತಿ ಭ್ರಷ್ಟ ಮುಖ್ಯಮಂತ್ರಿ ಆಗಿ ನಿವೃತ್ತರಾಗುತ್ತಾರೆ. ಕಡು ಭ್ರಷ್ಟ ಎಂಬ ಹೆಸರು ತಂದುಕೊಳ್ಳಬೇಡಿ. ಪಕ್ಷದಲ್ಲಿ ಇದು ಸಿದ್ದರಾಮಯ್ಯವ ಅವರ ಕೊನೆಯ ಬಜೆಟ್ ಅಂತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಉಡುಪಿಯಲ್ಲಿ ಶಾಸಕ ಬಸನಗೌಡ ಪಾಟೀಲ ಹೇಳಿಕೆ ನೀಡಿದರು.








