ಬೆಂಗಳೂರು : ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ ಹಲೋ ವಿಚಾರಗಳು ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು ಒಂದೇ ವೇದಿಕೆ ಮೇಲೆ ಅಕ್ಕಪಕ್ಕ ಕುಳಿತರು ಕೂಡ ಇಬ್ಬರು ಮಾತನಾಡದೆ ಸುಮ್ಮನಿದ್ದು ಕುತೂಹಲ ಮೂಡಿಸಿದೆ.
ಹೌದು ಬೆಂಗಳೂರಲ್ಲಿ ಕಾರ್ಯಕ್ರಮ ಒಂದರಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತರು ಮಾತನಾಡದೆ ಇದ್ದಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇದ್ದರು ಒಂದೇ ಒಂದು ಮಾತು ಆಡದೆ ನಾಯಕರು ಸೈಲೆಂಟ್ ಆಗಿದ್ದರು.
ಒಂದು ಕಡೆ ಸಿಎಂ ಸಿದ್ದರಾಮಯ್ಯ ವಾಚ್ ನೋಡುತ್ತಾ ಲೆಟರ್ ಓದುತ್ತಾ ಕುಳಿತಿದ್ದರೆ, ಡಿಕೆ ಶಿವಕುಮಾರ್ ಇನ್ನೊಬ್ರು ಯಾರೊಬ್ಬರ ಜೊತೆಗೆ ಮಾತನಾಡುತ್ತಾ ಇದ್ದಾರೆ. ಈ ಒಂದು ಘಟನೆ ಹಲವಾರು ವಿಷಯಗಳನ್ನ ಚರ್ಚೆಗೆ ಹುಟ್ಟು ಹಾಕಿದೆ. ಏಕೆಂದರೆ ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರನ್ನು ಭೇಟಿ ಆದ ಬಳಿಕ ಎಲ್ಲವೂ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಹೈಕಮಾಂಡ್ ಸೇರಿದಂತೆ ಎಲ್ಲಾ ನಾಯಕರನ್ನು ಭೇಟಿಯಾಗಿ ಬಂದು ತಮ್ಮ ಸಹವಾಲನ್ನು ಪ್ರಸ್ತಾಪ ಮಾಡಿ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.








