ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಅರ್ಹತಾ ಪರೀಕ್ಷೆಯನ್ನು ದಿನಾಂಕ: 22/02/2026ರಂದು ನಡೆಸಲು ಅಧಿಸೂಚನೆಯನ್ನು ಹೊರಡಿಸಿದ್ದು, ಪರೀಕ್ಷಾ ದಿನಾಂಕವನ್ನು ಮಾರ್ಪಡಿಸಿ ಈ ಕೆಳಗಿನಂತೆ ನೀಡಿದೆ.
ಪರೀಕ್ಷೆಯನ್ನು ಆಯಾಯ ಶೈಕ್ಷಣಿಕ ವಿಭಾಗದ ಕೇಂದ್ರ ಸ್ಥಾನದಲ್ಲಿ ನಡೆಸಲಾಗುವುದು.
ಅಭ್ಯರ್ಥಿಗಳ ಪರೀಕ್ಷಾ ಪ್ರವೇಶ ಪತ್ರವನ್ನು ಪರೀಕ್ಷೆ ಪ್ರಾರಂಭದ ದಿನಕ್ಕಿಂತ ಒಂದು ವಾರ ಮೊದಲು ಇಲಾಖಾ ವೆಬ್ ಸೈಟಿನಲ್ಲಿ ಲಭ್ಯಗೊಳಿಸಲಾಗುವುದು. ಅಭ್ಯರ್ಥಿಗಳು ತಮ್ಮ ಯೂಸರ್ ಐಡಿ ಮತ್ತು ಪಾಸ್ ವರ್ಡನ್ನು ಬಳಸಿ ಅದನ್ನು ಮುದ್ರಿಸಿಕೊಳ್ಳುವುದು.
ಅಭ್ಯರ್ಥಿಗಳಿಗೆ ಪ್ರಶೋತ್ತರ ಪತ್ರಿಕೆಗಳನ್ನು ನೀಡಲಾಗುವುದು. ಪ್ರತಿ ಪ್ರಶ್ನೆಯ ನಂತರ ಉತ್ತರ ಬರೆಯಲು ಸ್ಥಳಾವಕಾಶವನ್ನು ನೀಡಲಾಗುವುದು. ಭಾಷಾ ವಿಷಯಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಪ್ರಶ್ನೆಗಳು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿರುತ್ತವೆ. ಭಾಷಾ ವಿಷಯಗಳಲ್ಲಿ ಪ್ರಶ್ನೆಗಳು ಆಯಾಯ ಭಾಷೆಗಳಲ್ಲಿ ಮಾತ್ರ ಇರುತ್ತವೆ.
ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುತ್ತಾರೆ. ಆದುದರಿಂದ ಯಾವ ಸಂಖ್ಯೆಯ ಅರ್ಜಿಯನ್ನು ಪರಿಗಣಿಸಬೇಕೆಂಬ ಬಗ್ಗೆ ಅಭಿಮತ ನೀಡಲು ವೆಬ್ ಸೈಟಿನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಸಂಬಂಧಿತರು ಈ ಕಾರ್ಯವನ್ನು ತುರ್ತಾಗಿ ಪೂರೈಸುವುದು. ಇಲ್ಲವಾದಲ್ಲಿ ಅಭ್ಯರ್ಥಿಯ ಇತ್ತೀಚಿನ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುವುದು.
ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಕೆಲವು ಅಭ್ಯರ್ಥಿಗಳು ತಮ್ಮ ಘೋಷಣೆಯನ್ನು ಸಲ್ಲಿಸಿರುವುದಿಲ್ಲ. ಈ ಬಗ್ಗೆಯೂ ವೆಬ್ ಸೈಟಿನಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಸಂಬಂಧಿತರು ಈ ಕಾರ್ಯವನ್ನು ತುರ್ತಾಗಿ ಪೂರೈಸುವುದು.









