Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ ಪೌತಿ ಖಾತೆ

13/02/2026 5:21 AM

ರಾಜ್ಯದ `ಗ್ರಾ.ಪಂ. ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ನೀಡಿ ಸರ್ಕಾರ ಮಹತ್ವದ ಆದೇಶ

13/02/2026 5:20 AM

BIG NEWS : ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026 ಡಿ.31ರ ವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಅವಧಿ ವಿಸ್ತರಣೆ.!

13/02/2026 5:10 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಗ್ರಾ.ಪಂ. ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ನೀಡಿ ಸರ್ಕಾರ ಮಹತ್ವದ ಆದೇಶ
KARNATAKA

ರಾಜ್ಯದ `ಗ್ರಾ.ಪಂ. ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ನೀಡಿ ಸರ್ಕಾರ ಮಹತ್ವದ ಆದೇಶ

By kannadanewsnow5713/02/2026 5:20 AM

ಬೆಂಗಳೂರು : ಇ- ಪೌತಿ ತಂತ್ರಾಂಶದ ಮೂಲಕ ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಿಸಲು ಕ್ರಮವಹಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹಧನ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಏನಿದೆ ಸರ್ಕಾರದ ಆದೇಶದಲ್ಲಿ?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, 2025-26 ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418 ರಲ್ಲಿ ಘೋಷಿಸಿರುವಂತೆ, ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡುವ ಉದ್ದೇಶದಿಂದ ಇ-ಪೌತಿ ಆಂದೋಲನವನ್ನು ಆರಂಭಿಸಲಾಗಿದ್ದು, ಉಲ್ಲೇಖಿತ ಪತ್ರಗಳನ್ವಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇ-ಪೌತಿ ತಂತ್ರಾಂಶವನ್ನು ಅಳವಡಿಸಿ, ಕ್ರಮವಹಿಸುವ ಕುರಿತು ನಿರ್ದೇಶನಗಳನ್ನು ನೀಡಲಾಗಿರುತ್ತದೆ.

ಇ-ಪೌತಿ ತಂತ್ರಾಂಶದ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರು ಪೌತಿ ಖಾತೆ ಮಾಡಲು ಸಂಬಂಧಪಟ್ಟ ರೈತರ ಮನೆ ಬಾಗಿಲಿಗೆ ಸ್ವಯಂಪ್ರೇರಿತವಾಗಿ ತೆರಳಿ, ದಾಖಲೆಗಳನ್ನು ಪಡೆದು ಆಂದೋಲನದ ರೂಪದಲ್ಲಿ ಪೌತಿ ಖಾತೆ ಪ್ರಗತಿ ಸಾಧಿಸಲು ಕ್ರಮವಹಿಸಲಾಗುತ್ತಿದೆ. ಅದರಂತೆ ಮೃತ ಖಾತೆದಾರರ ವಾರಸುದಾರರಿಗೆ ಪಹಣಿ ದಾಖಲಾಗುವುದರಿಂದ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಸರ್ಕಾರದ ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗಿರುತ್ತದೆ.

ಆದುದರಿಂದ, ಸದರಿ ಇ-ಪೌತಿ ಆಂದೋಲನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಗ್ರಾಮವೃತ್ತದಲ್ಲಿ ಒಟ್ಟು 100 ಕ್ಕಿಂತ ಹೆಚ್ಚು ಪೌತಿ ಖಾತೆ ಮಾಡಲಿರುವ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ಪ್ರೋತ್ಸಾಹಧನ ನೀಡಲು ಸರ್ಕಾರವು ನಿರ್ಧರಿಸಿರುತ್ತದೆ. ໖: 10-03-2026 8 ವರೆಗೆ ಇ-ಪೌತಿ ತಂತ್ರಾಂಶದಲ್ಲಿ ಶಿರಸ್ತೇದಾರರಿಂದ ಅನುಮೋದನೆಯಾಗಿ ಭೂಮಿ ತಂತ್ರಾಂಶಕ್ಕೆ ಪುಶ್ ಆಗುವ ಪ್ರತೀ ಸರ್ವೆ ನಂಬರ್ ನ ಪೌತಿ ಖಾತೆ ಗೆ ಗ್ರಾಮ ಆಡಳಿತ ಅಧಿಕಾರಿಗೆ ತಲಾ ರೂ. 50 ರಂತೆ ಹಾಗೂ ಗ್ರಾಮ ಸಹಾಯಕರಿಗೆ ತಲಾ ರೂ. 30 ರಂತೆ ಪ್ರೋತ್ಸಾಹಧನ ನೀಡಲಾಗುವುದು. ಆದ್ದರಿಂದ ಸದರಿ ಅಂಶವನ್ನು ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ಗ್ರಾಮ ಸಹಾಯಕರಿಗೆ ತಿಳಿಸಲು ಹಾಗೂ ಇ-ಪೌತಿ ತಂತ್ರಾಂಶದಲ್ಲಿ ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು ಕಾನೂನುರೀತ್ಯಾ ತ್ವರಿತವಾಗಿ ದಿನಾಂಕ:10-03-2026 ರೊಳಗಾಗಿ ವಾರಸುದಾರರಿಗೆ ಖಾತಾ ಮಾಡಲು ಕ್ರಮವಹಿಸುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸೂಚಿಸಲು ಈ ಮೂಲಕ ತಿಳಿಸಿದೆ.

Good news for the state's Gram Panchayat staff: Government issues important order by giving incentive money
Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ ಪೌತಿ ಖಾತೆ

13/02/2026 5:21 AM4 Mins Read

BIG NEWS : ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026 ಡಿ.31ರ ವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಅವಧಿ ವಿಸ್ತರಣೆ.!

13/02/2026 5:10 AM2 Mins Read

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

12/02/2026 9:47 PM1 Min Read
Recent News

ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ ಪೌತಿ ಖಾತೆ

13/02/2026 5:21 AM

ರಾಜ್ಯದ `ಗ್ರಾ.ಪಂ. ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ನೀಡಿ ಸರ್ಕಾರ ಮಹತ್ವದ ಆದೇಶ

13/02/2026 5:20 AM

BIG NEWS : ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026 ಡಿ.31ರ ವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಅವಧಿ ವಿಸ್ತರಣೆ.!

13/02/2026 5:10 AM

‘ಭಾರತ’ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಯಲಿದೆ ; ಫಿಚ್ ರೇಟಿಂಗ್ಸ್

12/02/2026 10:06 PM
State News
KARNATAKA

ರಾಜ್ಯದ ಜನತೆಗೆ ಮತ್ತೊಂದು ಗುಡ್‌ನ್ಯೂಸ್ : ಮನೆ ಬಾಗಿಲಿಗೆ ಬರಲಿದೆ ಪೌತಿ ಖಾತೆ

By kannadanewsnow0913/02/2026 5:21 AM KARNATAKA 4 Mins Read

ಶಿವಮೊಗ್ಗ : ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ…

ರಾಜ್ಯದ `ಗ್ರಾ.ಪಂ. ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಪ್ರೋತ್ಸಾಹ ಧನ ನೀಡಿ ಸರ್ಕಾರ ಮಹತ್ವದ ಆದೇಶ

13/02/2026 5:20 AM

BIG NEWS : ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: 2026 ಡಿ.31ರ ವರೆಗೆ ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಅವಧಿ ವಿಸ್ತರಣೆ.!

13/02/2026 5:10 AM

ರಾಜ್ಯ ಸರ್ಕಾರದಿಂದ ‘ಶಕ್ತಿ ಯೋಜನೆ’ ದುರ್ಬಳಕೆ ತಡೆಗೆ ಮಹತ್ವದ ಕ್ರಮ: ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವಿತರಣೆ

12/02/2026 9:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.