ಇಂದೋರ್: ಕಳ್ಳರನ್ನು ಹಿಡಿಯಬೇಕಾದ ಪೊಲೀಸರೇ ಖದೀಮರಂತೆ ಮನೆ ನುಗ್ಗಿ ಚಿನ್ನ ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ದಾಳಿಯ ನೆಪದಲ್ಲಿ ಮನೆಗೆ ನುಗ್ಗಿದ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳು ಚಿನ್ನದ ಆಭರಣಗಳನ್ನು ಕಿಸೆಗೆ ಇಳಿಸಿಕೊಳ್ಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇಡೀ ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.
ಇಂದೋರ್‌ನ ಬಾಂಗಂಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಂಚನೆ ಪ್ರಕರಣವೊಂದರ ತನಿಖೆಗಾಗಿ ಪೊಲೀಸರು ಶಂಕಿತ ವ್ಯಕ್ತಿಯೊಬ್ಬನ ಮನೆಗೆ ದಾಳಿ ನಡೆಸಿದ್ದರು. ಈ ವೇಳೆ ತಂಡದಲ್ಲಿದ್ದ ಇಬ್ಬರು ಕಾನ್ಸ್‌ಟೇಬಲ್‌ಗಳು ಮನೆಯ ಬೀರು ಮತ್ತು ಡ್ರಾಯರ್‌ಗಳನ್ನು ತಪಾಸಣೆ ಮಾಡುವಂತೆ ನಟಿಸಿ, ಅಲ್ಲಿದ್ದ ಚಿನ್ನದ ಒಡವೆಗಳನ್ನು ಗುಟ್ಟಾಗಿ ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ.
ಪೊಲೀಸರು ಹೋದ ಬಳಿಕ ಮನೆಯವರು ತಪಾಸಣೆ ನಡೆಸಿದಾಗ ಚಿನ್ನಾಭರಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರ ಅಸಲಿ ಮುಖವಾಡ ಕಳಚಿಬಿದ್ದಿದೆ.
ಪೊಲೀಸರು ಕಳ್ಳತನ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಸಿಟಿವಿ ಸಾಕ್ಷ್ಯಧಾರಗಳ ಆಧಾರದ ಮೇಲೆ ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಇಂದೋರ್ ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ. ಇವರ ಜೊತೆ ದಾಳಿಯಲ್ಲಿದ್ದ ಇತರ ಪೊಲೀಸರಿಗೂ ಇದರಲ್ಲಿ ಭಾಗಿದಾರಿಕೆ ಇದೆಯೇ ಎಂಬ ಬಗ್ಗೆ ಇಲಾಖಾ ತನಿಖೆ ಆರಂಭವಾಗಿದೆ.
पुलिस ही बन गई चोर!
देख लीजिए ये वीडियो…इंदौर में वारंट तामील कराने के बहाने व्यापीर गौरव जैन के घर में पुलिसकर्मी घुसे. मास्टर चाभी से ताला खोला, CCTV बंद किया. आरोप है पुलिस 22 तोला सोना चुराकर ले गई. मामला सामने आने के बाद दरोगा सहित 5 पुलिसकर्मी सस्पेंड कर दिए गए हैं. pic.twitter.com/8d8uw0Lbmj
— News Pinch (@TheNewspinch) April 21, 2026








