ಬೆಂಗಳೂರು : ರಾಮನಗರದಲ್ಲಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯ ಮನೆಯ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನೋದ (34) ಎಂಬ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.
ಮನೆಯ ಬಳಿ ಕೆಮ್ಮಿದ್ದಕ್ಕೆ ವಿನೋದ್ ಜೊತೆಗೆ ಹೊಂಬಯ್ಯ ಮತ್ತು ವಿಜಯ್ ಸೇರಿದಂತೆ ಇತರರು ಜಗಳ ತೆಗೆದು, ಹಲ್ಲೆ ಮಾಡಿದ್ದಾರೆ. ಮೂರು ದಿನಗಳ ಕೆಳಗೆ ವಿನೋದ್ ಮೇಲೆ ಹಲ್ಲೆ ಮಾಡಿದ್ದರು.ತೀವ್ರ ಹಲ್ಲೆಗೆ ಒಳಗದಂತಹ ವಿನೋದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಮೂರು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ರಾಜಸ್ಥಾನ ಮೂಲದ ವಿನೋದ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.








