ಬಳ್ಳಾರಿ : ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಫೆ.16 ರಿಂದ 21ರವರೆಗೆ 6 ದಿನಗಳ ಜೇನು ಕೃಷಿಯ ಕುರಿತು ಉಚಿತ ತರಬೇತಿಯನ್ನು ಕಂಪ್ಲಿಯ ಕೃಷಿ ತರಬೇತಿ ಕೇಂದ್ರದಲ್ಲಿ ನೀಡಲು ಉದ್ದೇಶಿಸಲಾಗಿದ್ದು, ಆಸಕ್ತ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಎಲ್ಲಾ ವರ್ಗದ ರೈತರು, ರೈತ ಮಹಿಳೆಯರಿಂದ ಹೆಸರು ನೋಂದಣಿಮಾಡಿಕೊಳ್ಳಲು ಆಹ್ವಾನಿಸಲಾಗಿದೆ.
ತರಬೇತಿಯಲ್ಲಿ ಊಟ ಹಾಗೂ ವಸತಿ ಸೌಕರ್ಯ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರಾದ ವಿದ್ಯಾವತಿ ಹೊಸಮನಿ(ಮೊ.7353533138), ಕೃಷಿ ಅಧಿಕಾರಿಗಳಾದ ಯೇಸುಬಾಬು(ಮೊ.6360645255), ನವ್ಯ ಪ್ರಶಾಂತ್(ಮೊ.6360139316) ಗೆ ಸಂಪರ್ಕಿಸಬಹುದು ಎಂದು ಕಂಪ್ಲಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂಸ್ವಾಧೀನ ಪ್ರಕರಣದಲ್ಲಿ ಕರ್ನಾಟಕ ಸಲ್ಲಿಸಿದ 530 ಮೇಲ್ಮನವಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ!
ಇಂದಿನಿಂದ ಮೈಸೂರು ಸ್ಯಾಂಡಲ್ ವುಡ್ ಸೋಪಿಗೆ ನಟಿ ತಮನ್ನಾ ರಾಯಭಾರಿ: 57 ಹೊಸ ಉತ್ಪನ್ನ ಬಿಡುಗಡೆ








