ಲಕ್ಷ್ಮೀ ಸರಸ್ವತಿ ಮತ್ತು ಗಂಗೆ :-
ವಿಷ್ಣುವಿಗೆ ಆಪ್ತರಾದ ಲಕ್ಷ್ಮಿ- ಸರಸ್ವತಿ- ಗಂಗೆಯರಲ್ಲಿ ಒಮ್ಮೆ ವಾಗ್ವಾದ ಬಂದಿತು. ವಿಷ್ಣು ಯಾವಾಗಲೂ ಗಂಗೆಯ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ದೇವಿ ಸರಸ್ವತಿಗೆ ಅಸಮಧಾನವಾಗಿ ಗಂಗೆ ಜೊತೆ ಒರಟಾಗಿ ವರ್ತಿಸಿದಳು. ಗಮನಿಸಿದ ಲಕ್ಷ್ಮಿ, ನಾರಾಯಣನಿಗೆ ಎಲ್ಲರೂ ಸಮಾನರು ಗಂಗೆ ಹೆಚ್ಚು ನೀನು ಕಡಿಮೆ ಅಂತ ಇಲ್ಲ ಎಂದು ಸಮಾಧಾನ ಹೇಳಿದಳು. ಆದರೆ ಸರಸ್ವತಿಗೆ ಸರಿ ಎನಿಸಲಿಲ್ಲ ನನ್ನನ್ನು ಸಮಾಧಾನ ಪಡಿಸಲು, ಲಕ್ಷ್ಮಿ ಈ ರೀತಿ ಮಾತನಾಡುತ್ತಿದ್ದಾಳೆ, ಇವಳೂ ಸಹ ಗಂಗೆ ಪರ ಎಂದು ತಪ್ಪು ತಿಳಿದು, ನೀನೇನು ನನ್ನನ್ನು ಸಮಾಧಾನ ಪಡಿಸುವುದು ಬೇಡ ನನಗೆ ಎಲ್ಲಾ ಗೊತ್ತಿದೆ ಎಂದು, ಕೋಪದಿಂದ ‘ಲಕ್ಷ್ಮಿಗೆ’ ನೀನು ಒಂದು ನದಿಯಾಗಿ- ಮುಂದೆ ಗಿಡವಾಗು ಎಂದು ಸರಸ್ವತಿ ಶಾಪ ಕೊಟ್ಟಳು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಶಾಪ ಕೊಟ್ಟ ಸರಸ್ವತಿ ಮೇಲೆ ಲಕ್ಷ್ಮಿ ಕೋಪ ಮಾಡಿಕೊಳ್ಳದೆ ಶಾಂತವಾಗಿಯೇ ಇದ್ದಳು. ಆದರೆ ಸರಸ್ವತಿ ಮೇಲೆ ಗಂಗೆಗೆ ಕೋಪ ಬಂದಿತು. ನನ್ನ ಸಹೋದರಿ ಲಕ್ಷ್ಮಿಗೆ ಶಾಪ ಕೊಟ್ಟೆಯಲ್ಲ ನೀನು ಸಹ ನದಿಯಾಗಿ ಹರಿದು ಪಾಪಿಗಳು ವಾಸಿಸುವ ಭೂಲೋಕಕ್ಕೆ ಹೋಗು ಎಂದು ಗಂಗೆ -ಸರಸ್ವತಿಗೆ ಶಾಪ ಕೊಟ್ಟಳು. ಸರಸ್ವತಿ ಇಷ್ಟಕ್ಕೆ ಸುಮ್ಮನಾಗದೆ ಗಂಗೆಗೆ ನೀನು ಸಹ ಭೂಲೋಕದಲ್ಲಿ ನದಿಯಾಗಿ ಹರಿದು ಎಲ್ಲರ ಪಾಪಗಳನ್ನು ಹೊತ್ತ ಕೊಳೆಯನ್ನು ನೀನು ತೊಳೆಯುತ್ತಿರು ಎಂದು ಶಾಪ ಕೊಟ್ಟ ಳು. ಇಂತಹ ಘಟನೆಗಳು ಕಾರ್ಯಕಾರಣಕ್ಕಾಗಿ ದೇವಲೋಕದಲ್ಲಿ ಜರುಗುತ್ತಿರುತ್ತೆ. ಕಾರಣವೇ ಇಲ್ಲದೆ ಲಕ್ಷ್ಮಿ- ಸರಸ್ವತಿ- ಗಂಗೆಯರಿಗೆ ಜಗಳವಾಗಿ ಒಬ್ಬರಿಗೂಬ್ಬರು ಶಾಪಕ್ಕೆ ಗುರಿ ಮಾಡಿಕೊಂಡರು. ಗಮನಿಸುತ್ತಿದ್ದ ಮಹಾವಿಷ್ಣು ಮೂವರನ್ನು ಕರೆದು, ನಿಮಗೆಲ್ಲಾ ತಾಳ್ಮೆ ಇರಲಿ, ಇದೆಲ್ಲವೂ ಪೂರ್ವ ನಿಯೋಜಿತವಾಗಿದ್ದು, ಅದಕ್ಕೆ ನೆಪ ಎಂಬಂತೆ ನೀವು ಕಾರಣರಾದಿರಿ ಅಷ್ಟೇ ಎಂದು ಸಮಾಧಾನಪಡಿಸಿದ.
ಲಕ್ಷ್ಮಿಗೆ ಭೂಲೋಕದಲ್ಲಿ ಧರ್ಮಧ್ವಜ ಎಂಬ ರಾಜನ ಮನೆಯಲ್ಲಿ ಅವತರಿಸಿ ಮೂರು ಲೋಕಗಳನ್ನು ಪಾವನಗೊಳಿಸಿ ನಂತರ ಪವಿತ್ರ ತುಳಸಿ ಗಿಡವಾಗಿ ಪ್ರಸಿದ್ಧಿಯಾಗಿ ಎಲ್ಲರಿಗೂ ಪೂಜ್ಯನೀಯಳಾಗುವೆ. ನನ್ನಿಂದಲೇ ಪ್ರಕಟವಾಗುವ “ಶಂಖಚೂಡ” ಎಂಬ ಸೂರ್ಯನ ಪತ್ನಿಯಾಗಿ ನಂತರ ಗಂಡಕೀ ನದಿಯಾಗಿ ಹರಿದು ಆಮೇಲೆ ಭೂಮಿಯನ್ನು ಬಿಟ್ಟು ತುಳಸಿ ರೂಪದ ಪತ್ನಿಯಾಗಿ ವೈಕುಂಠಕ್ಕೆ ಬರುವೆ ಎಂದು ಲಕ್ಷ್ಮಿಗೆ ಹೇಳಿದನು.
ವಿಷ್ಣು ನುಡಿದಂತೆ,
ಭಗೀರಥನ ಕಠಿಣ ತಪಸ್ಸಿನಿಂದಾಗಿ ಗಂಗೆ ಭೂಲೋಕಕ್ಕೆ ಇಳಿಯುತ್ತಾಳೆ. ಮುಂದೆ ಭಾಗಿರತಿಯಾಗಿ ಶಿವನ ಮಡದಿಯಾಗುತ್ತಾಳೆ. ಇನ್ನು ದೇವಿ ಸರಸ್ವತಿ ಭರತ ವರ್ಷದಲ್ಲಿ ಪ್ರಕಟಳಾಗಿ ನಂತರ ಬ್ರಹ್ಮದೇವರ ಮಡದಿಯಾಗುತ್ತಾಳೆ ಎಂದು ವಿಶ್ಯಾಪದ ವಿಷಯವನ್ನು ತಿಳಿಸಿದನು. ಈ ರೀತಿ ಕಾರ್ಯಕಾರಣಕ್ಕಾಗಿ ತ್ರಿದೇವಿಯರು ಭೂಲೋಕದಲ್ಲಿ ನದಿಯಾಗಿ ಹರಿದು ಪ್ರಸಿದ್ಧಿಯಾದರು.
ಲಕ್ಷ್ಮಿ ಗಂಡಕೀ ನದಿಯಾದ ಕಥೆ :- ಪೌರಾಣಿಕ ಹಿನ್ನೆಲೆಯುಳ್ಳ ಘಟನೆಗಳು ಈ ನದಿ ದಡದಲ್ಲಿ ನಡೆದಿದೆ. ರಾಕ್ಷಸ ರಾಜ ಜಲಂಧರನ ಪತ್ನಿ ವೃಂದಾದೇವಿ ಇವಳು ಪತಿವ್ರತೆ ಮತ್ತು ವಿಷ್ಣುವಿನ ಪರಮ ಭಕ್ತೆ. ಇವಳ ಪತಿ ಜಲಂಧರ ಅತ್ಯಂತ ಶೂರನಾಗಿದ್ದು ಎಲ್ಲಾ ಕಡೆ ಯುದ್ಧ ಮಾಡಿ ಜಯಶಾಲಿಯಾಗಿ ಬರುತ್ತಿದ್ದನು. ಕಾರಣ ಅವನು ಯುದ್ಧಕ್ಕೆ ಹೊರಟ ತಕ್ಷಣ ಪತಿ ಜಯಶಾಲಿಯಾಗಿ ಬರಲಿ ಎಂದು ಸಂಕಲ್ಪ ಮಾಡಿ ವೃಂದಾ ಭಗವಂತನ ಧ್ಯಾನ ಮಾಡುತ್ತಿದ್ದಳು. ಇವಳ ಪತಿವ್ರತಾ ಶಕ್ತಿಯಿಂದಾಗಿ ಜಲಂಧರನಿಗೆ ಸೋಲೇ ಇಲ್ಲ. ಕೊಲ್ಲುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಒಮ್ಮೆ ಪಾತಾಳ- ದೇವಲೋಕ ಎಲ್ಲಾ ಗೆದ್ದು ಕೈಲಾಸಕ್ಕೆ ಬರುತ್ತಾನೆ. ಅಲ್ಲಿ ಪಾರ್ವತಿ ನೋಡಿ ಅವಳ ಸೌಂದರ್ಯಕ್ಕೆ ಮರುಳಾದನು. ಪಾರ್ವತಿಗೆ ಅವನ ಭಾವನೆ ಅರ್ಥವಾಗಿ ಶಿವನನ್ನು ಸ್ಮರಿಸಿದಳು.
ಶಿವ ಜಲಂಧರನ ಜೊತೆ ಯುದ್ಧ ಮಾಡುತ್ತಾನೆ. ಜಲಂಧರನ ಪತ್ನಿ ಪತಿವ್ರತೆ ಇವನನ್ನು ಸೋಲಿಸುವುದು ಅಸಾಧ್ಯ ಎಂದು ಶಿವನಿಗೆ ತಿಳಿಯಿತು. 1000 ವರುಷ ಕಳೆದರು ಯುದ್ಧ ನಡೆಯುತ್ತಿತ್ತು. ಪರಮೇಶ್ವರ ಮತ್ತು ಜಲಂಧರ ಇಬ್ಬರೂ ಸೋಲಲಿಲ್ಲ. ದೇವಾನುದೇವತೆಗಳು ವಿಷ್ಣುಗೆ ತಿಳಿಸಿದರು. ವಿಷ್ಣು ಹೇಳಿದ ಜಲಂಧರನನ್ನು ಕೊಲ್ಲುವುದು ಸಾಧ್ಯವಿಲ್ಲ. ಅವನ ಪತ್ನಿಯ ಪತಿಭಕ್ತಿ ಅವನಿಗೆ ರಕ್ಷಣೆ ನೀಡುತ್ತಿದೆ ಏನಾದರೂ ಬೇರೆ ಉಪಾಯ ಮಾಡಬೇಕು ಎಂದನು.
ವಿಷ್ಣು ಯೋಜನೆ ಮಾಡಿ ಜಲಂಧರನಂತೆ ವೇಷ ಧರಿಸಿ ಜಲಂಧರನ ಅರಮನೆಗೆ ಬಂದನು. ವ್ರತ ಸಂಕಲ್ಪ ಮಾಡಿ ಕುಳಿತ ವೃಂದಾದೇವಿ ತನ್ನ ಪತಿ ಯುದ್ಧ ಮುಗಿಸಿ ಬಂದ ಎಂದು ಸಂತೋಷದಿಂದ ವ್ರತ ಬಿಟ್ಟು ಎದ್ದು ಬಂದಳು. ಹೀಗೆ ವ್ರತ ಭಂಗ ವಾದಾಗ, ಶಿವನು ಸುಲಭವಾಗಿ ಜಲಂಧರನನ್ನು ಸಂಹರಿಸಿದನು. ಇದು ವೃಂದಾ ದೇವಿಗೆ ತಿಳಿಯುತ್ತದೆ. ನಿಜಾಂಶ ತಿಳಿದು ಅವಳು ವಿಷ್ಣುವಿನ ಮೇಲೆ ಕೋಪದಿಂದ ಮೋಸ ಮಾಡಿ ನನ್ನ ಪತಿಯ ಸಾವಿಗೆ ಕಾರಣನಾದ ನಿನಗೆ ನಿನ್ನ ಸುಂದರ ರೂಪ ಬದಲಾಗಿ ಕರಿ ಕಲ್ಲಾಗಿ ಬೀಳು ಎಂದು ಶಾಪ ಕೊಟ್ಟಳು. ಪತಿವ್ರತೆಯ ಶಾಪ ಹುಸಿ ಯಾಗದಂತೆ ಮಹಾವಿಷ್ಣು ಹೇಳಿದ, ನಾನು ನಿನ್ನ ಶಾಪದಂತೆ ಕಲ್ಲಾಗುತ್ತೇನೆ. ನೀನು ಈ ಜನ್ಮದ ನಂತರ ಮುಂದಿನ ಜನ್ಮದಲ್ಲಿ ಗಂಡಕೀ ನದಿಯಾಗಿ ಹರಿದು ಬಾ ನಿನ್ನ ಒಡಲಲ್ಲಿ ಕಲ್ಲಾಗಿ ಹುಟ್ಟಿ ವಿಷ್ಣು ರೂಪದ ಸಾಲಿಗ್ರಾಮ ಆಗಿರುವೆ ಎಂದನು. ವೃಂದಾದೇವಿ ಅಂದಿನಂತೆ ಪತಿಯೊಡನೆ ಸಹಗಮನ ಮಾಡುತ್ತಾಳೆ. ಮರುಜನ್ಮದ ಲ್ಲಿ ಉತ್ತರದ ನೇಪಾಳದ ಟಿಬೆಟ್ ಸಮೀಪ ಎತ್ತರದ ಪರ್ವತ ಪ್ರದೇಶದಲ್ಲಿ ಗಂಡಕಿ ನದಿಯಾಗಿ ಹುಟ್ಟಿ ರಭಸವಾಗಿ ಹರಿದು ಬರುತ್ತಾಳೆ. ಗಂಡಕೀ ನದಿ ಒಡಲಲ್ಲಿ ಮಹಾವಿಷ್ಣು ಕರಿ ಕಲ್ಲಿನ ಸಾಲಿಗ್ರಾಮವಾಗಿ ಸೇರುತ್ತಾನೆ. ಮತ್ತೊಂದು ಜನ್ಮದಲ್ಲಿ ವೃಂದೇ ತುಳಸಿಯಾಗಿ ಹುಟ್ಟಿ ಬರುತ್ತಾಳೆ. ಕಾರ್ತಿಕ ಮಾಸದ ದ್ವಾದಶಿ ದಿನ, ವಿಷ್ಣು ರೂಪಿ ಸಾಲಿಗ್ರಾಮ ದೊಂದಿಗೆ ಲಕ್ಷ್ಮಿ ರೂಪದ ತುಳಸಿ ಜೊತೆ ಕಲ್ಯಾಣೋತ್ಸವ ಮಾಡುತ್ತೇವೆ.
ಸರಸ್ವತಿ ನದಿ:- ಈ ದೇಶದ ಮೊದಲ ನಾಗರಿಕತೆ ಉಗಮ ಆಗಿದ್ದು ಎಲ್ಲಿ ಎಂದರೆ, ಸಿಂಧೂ ನಾಗರಿಕತೆ, ಹರಪ್ಪ ಮೋಹೆಂಜೋದಾರ್ ಎಂದು ತಿಳಿದಿದ್ದೇವೆ. ಕಾರಣ ಬ್ರಿಟಿಷರು ರೈಲು ಮಾರ್ಗ ನಿರ್ಮಾಣ ಮಾಡಲು ಹೊರಟಾಗ ಸಂಶೋಧನೆಯಲ್ಲಿ ದೊರೆತ ಮಾಹಿತಿಗಳ ಕಾರಣದಿಂದ ಪಠ್ಯಪುಸ್ತಕಗಳಲ್ಲಿ ಬಂದಿತು. ಆದರೆ ಈ ಎರಡು ನದಿಗಳ ನಾಗರಿಕತೆಗಳಿಗಿಂತ ಮೊದಲೇ ಭಾರತದಲ್ಲಿ ಪೌರಾಣಿಕ ಹಿನ್ನೆಲೆ ಯುಳ್ಳ ನಾಗರಿಕತೆ ಇತ್ತು ಎಂಬುದಕ್ಕೆ ಸುಮಾರು 10000 ವರ್ಷಗಳ ಹಿಂದೆ ಸರಸ್ವತಿ ನದಿ ಹಿಮಾಲಯದಲ್ಲಿ ಹುಟ್ಟಿ ಕಚ್ಚ್ ಪ್ರದೇಶದಲ್ಲಿ ಹರಿಯುತ್ತಿತ್ತು ಎಂಬು ದಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ಯುನಿವರ್ಸಿಟಿ ಸಂಶೋಧನೆ ಯಲ್ಲಿ ದಾಖಲಾಗಿದೆ. ಅತ್ಯಂತ ಪುರಾತನ ಸರಸ್ವತಿ ನದಿ ಹಿಮಾಲಯದಿಂದ ರಾಜಸ್ಥಾನದವರೆಗೂ ಗುಪ್ತಗಾಮಿಯಾಗಿ ಇಂದಿಗೂ ಹರಿಯುತ್ತಿದ್ದಾಳೆ ಎಂದು ತಿಳಿದುಬಂದಿದೆ. ಇಂದಿಗೂ
ಪ್ರಾಥ: ಸ್ಮರಣೆಯಲ್ಲಿ ನಾವು ಸ್ಮರಿಸುವುದು!
“ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂದು
ಗಂಗೆ:- ಸೂರ್ಯವಂಶದ ದೊರೆ ಸಗರ ಚಕ್ರವರ್ತಿ ಹಮ್ಮಿಕೊಂಡಿದ್ದ ಅಶ್ವಮೇಧ ಯಾಗದ ಕಾರಣದಲ್ಲಿ ಅವನ 60000 ಮಕ್ಕಳು ಕಪಿಲ ಮುನಿಗಳ ಕೋಪಕ್ಕೆ ಸುಟ್ಟು ಭಸ್ಮವಾದರು. ಸಗರನ ಮತ್ತೊಬ್ಬ ಮಗ ಅಸಮಂಜನ ಮಗ ಅಂಶು ಮಂತ ಯಜ್ಞಾಶ್ವವನ್ನು ಪುನಃ ತರಲು ಯಜ್ಞ ಸಂಪನ್ನವಾಯಿತು. ಆದರೆ 60,000 ಮಕ್ಕಳ ದುರ್ಮರಣ ದಿಂದಾಗಿ ಸಗರನಿಗೆ ಚಿಂತೆ ಕಾಡಿತು. ಆ ಮಕ್ಕಳಿಗೆ ಸದ್ಗತಿ ದೊರಕಿಸಲು ಗರುಡನ ಸಲಹೆಯಂತೆ ದೇವನದಿಯಾದ ಗಂಗೆಯನ್ನು ಭೂಮಿಗೆ ಕರೆತರುವ ಅವನ ಸಂಕಲ್ಪ ಅವನ ಜೀವಿತಾವಧಿಯಲ್ಲಿ ನೆರವೇರಲಿಲ್ಲ. ನಂತರ ಸಗರನ ಮೊಮ್ಮಗ ಅಂಶುಮಂತ ಅವನ ಮಗ ದಿಲೀಪ ಇವರಿಬ್ಬರ ಪ್ರಯತ್ನವು ಭೂಮಿಗೆ ಗಂಗೆಯನ್ನು ತರಲು ಸಾಧ್ಯವಾಗಲಿಲ್ಲ. ಮುಂದೆ ದಿಲೀಪನ ಮಗ ಭಗೀರಥ ಗಂಗೆಯನ್ನು ಭೂಮಿಗೆ ಕರೆ ತರಲು ಪರ್ವತ ಪ್ರದೇಶದಲ್ಲಿ ಒಂಟಿ ಕಾಲಲ್ಲಿ ನಿಂತು ಕಠಿಣ ತಪಸ್ಸು ಮಾಡಿದಾಗ “ಗಂಗೆ” ಪ್ರತ್ಯಕ್ಷಳಾದಳು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗಂಗೆ ಹೇಳಿದಳು ನಾನು ಭೂಮಿಗೆ ಬರ ಬೇಕಾದರೆ ನನ್ನ ವೇಗ ತಡೆಯುವ ಶಕ್ತಿ ಶಿವನಲ್ಲದೆ ಯಾರಿಗೂ ಇಲ್ಲ ನೀನು ಶಿವನನ್ನು ಮೆಚ್ಚಿಸಿದರೆ ಭೂಮಿಗೆ ಬರುತ್ತೇನೆ ಎಂದು ಮಾತು ಕೊಟ್ಟಳು. ಶಿವನನ್ನು ತಪಸ್ಸಿನಿಂದ ಭಗೀರಥ ಮೆಚ್ಚಿಸಿದನು. ಆಕಾಶಗಾಮಿ ಗಂಗೆ ಶಿವನ ಜಟೆಯನ್ನು ಸೇರಿದಾಗ ಶಿವನು ಗಂಗಾಧರನಾದ. ಮತ್ತೆ ಭಗೀರಥ ಶಿವನನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಶಿವನು ಜಟೆಯಿಂದ ಗಂಗೆಯನ್ನು
ನಿಧಾನವಾಗಿ ಭೂಮಿಗೆ ಹರಿಸಿದನು. ಭೂಮಿಗೆ ಬಂದ ಗಂಗೆ ಋಷಿಮುನಿಗಳ ಕಾರಣದಿಂದ ಜಾನ್ಹವಿಯಾದ, ಗಂಗೆಯನ್ನು ಭಗೀರಥ ಪಾತಾಳ ಲೋಕಕ್ಕೆ ಕರೆದೊಯ್ಯಲು, ಅವನ ಮುತ್ತಾತಂದಿರ ಚಿತಾಭಸ್ಮದ ಮೇಲೆ ಗಂಗೆ ಪ್ರಹರಿಸಿದಾಗ
ಅವರಿಗೆಲ್ಲ ಸದ್ಗತಿ ದೊರೆಯಿತು. ಭಗೀರಥನ ಪ್ರಯತ್ನದಿಂದ ಗಂಗೆ ಭೂಮಿಗೆ ಬಂದ ಕಾರಣ ಭಾಗಿರತಿ ಆದಳು. ಗಂಗೆಯ ಆಸೆಯಂತೆ ಶಿವನ ಜಟೆ ಸೇರಿದಳು.
ಯಾ ದೇವಿ ಸರ್ವಭೂತೇಷು ಚೇತನೇತ್ಯಭಿಧೀಯತೇ!
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!!
ಯಾ ದೇವಿ ಸರ್ವಭೂತೇಶು ಶೃತಿ- ಸ್ಮೃತಿ ರೂಪೇಣ ಸಂಸ್ಥಿತಾ!
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!!
ಯಾ ದೇವಿ ಸರ್ವಭೂತೇಶು ಲಕ್ಷ್ಮೀ ರೂಪೇಣ ಸಂಸ್ಥಿತಾ!
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!!









