ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಇಂದು ತಾಯಿಯ ದರ್ಶನ ಪಡೆದಂತ ಆರ್ ಬಿ ಡಿ ಸಂಸ್ಥೆಯ ಮಹೇಶ್ ಮತ್ತು ಸಿಬ್ಬಂದಿಗಳು, ಬೃಹತ್ ಗಾತ್ರದ ಹೂವಿನ ಹಾರವನ್ನು ದೇವಿಗೆ ಸಮರ್ಪಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಐತಿಹಾಸಿಕ ಪ್ರಸಿದ್ಧ ಮಾರಿಕಾಂಬೆ ಜಾತ್ರೆಗೆ ಇಂದಿಗೆ 9ನೇ ದಿನವಾಗಿದೆ. ಈ ದಿನದಂದು ಸಾಗರದ ಹೆಸರಾಂತ, ವಿಶ್ವಾಸಾರ್ಹ ಸಂಸ್ಥೆಯಾದಂತ ರಾಯಲ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಸಂಸ್ಥೆಯ ಮಾಲೀಕರಾದಂತ ಮಹೇಶ್ ಅವರು ಮಾರಿಕಾಂಬೆಯ ದರ್ಶವನ್ನು ಪಡೆದರು. ಇದೇ ಸಂದರ್ಭದಲ್ಲಿ ಬೃಹತ್ ಗಾತ್ರದ ಹೂವಿನ ಹಾರವನ್ನು ಭಕ್ತಿ ಪೂರ್ವಕವಾಗಿ ಮಾರಿಕಾಂಬೆಗೆ ಅರ್ಪಿಸಿದರು.
ಆ ಬಳಿಕ ಮಾತನಾಡಿದಂತ ಆರ್ ಬಿ ಡಿ ಮಾಲೀಕರಾದಂತ ಮಹೇಶ್ ಅವರು, ಇಂದು ಸಾಗರದ ಮಾರಿಕಾಂಬ ದೇವಿಗೆ ಹೂವಿನ ಹಾರವನ್ನು ಅರ್ಪಿಸಲಾಗಿದೆ. ಇದು ಹೂವಿನ ಹಾರವಲ್ಲ, ನಮ್ಮ ಸಂಸ್ಥೆಯ ನೂರಾರು ಕಾರ್ಮಿಕರ ಭಕ್ತಿಯ ಪ್ರತೀಕವಾಗಿದೆ. ತಾಯಿ ಮಾರಿಕಾಂಬೆಗೆ ಹೂವಿನ ಹಾರದ ಸೇವೆ ಮಾಡುವುದೇ ಒಂದು ಪುಣ್ಯವಾಗಿದೆ. ನಮ್ಮ ಸಂಸ್ಥೆಯಿಂದ ಅರ್ಪಿಸಿದ ಹೂವಿನ ಹಾರವು ವಿಶೇಷ ವಿನ್ಯಾಸದಿಂದ ಕೂಡಿದೆ. ಆ ಮಹಾತಾಯಿ ಮಾರಿಕಾಂಬೆ ದೇವಿಯು ಎಲ್ಲರಿಗೂ ಒಳಿತು ಮಾಡಲು ಎಂಬುದಾಗಿ ಹೇಳಿದರು.

ಆರ್ ಬಿ ಡಿ ಸಂಸ್ಥೆಯ ಬಗ್ಗೆ ಒಂದಷ್ಟು ಮಾಹಿತಿ..
ಅಂದಹಾಗೇ ರಾಯಲ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ ಸಂಸ್ಥೆಯು (Royal Builders and Developers-RBD) ವ್ಯಾಪಾರ-ವಹಿವಾಟಿನ ದೃಷ್ಠಿಯನ್ನು ಹೊಂದಿಲ್ಲ. ಬದಲಾಗಿ ತನ್ನೂರಿನ ನೂರಾರು ಜನರಿಗೆ ಕೆಲಸ ಒದಗಿಸಿರುವ ಸಹೃದಯಿ ಸಂಸ್ಥೆಯಾಗಿದೆ. ಸಾಗರವೆಂಬ ಪುಟ್ಟ ಊರಲ್ಲಿ ಹುಟ್ಟಿಕೊಂಡ ಆರ್ ಬಿ ಡಿ ಸಂಸ್ಥೆಯು ( RBD) ಇಂದು ರಾಜ್ಯದ ರಾಜಧಾನಿ ಬೆಂಗಳೂರಲ್ಲೂ ತನ್ನ ಕದಂಬ ಬಾಹುವನ್ನು ಚಾಚಿ ನಿಂತಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಸರುಗಳಿಸಿರುವಂತ ಆರ್ ಬಿ ಡಿ ಸಂಸ್ಥೆಯು, ಸಾವಿರಾರು ಜನರಿಗೆ ನಿವೇಶನ ಕಲ್ಪಿಸಿ, ಕನಸು ನನಸು ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದು ಆರ್ ಬಿಡಿ ಸಂಸ್ಥೆಯು ವಿವಿಧ ಕ್ಷೇತ್ರದಲ್ಲೂ ಕದಂಬ ಬಾಹುವನ್ನು ಚಾಚಿಕೊಂಡಿದೆ. ರಿಯಲ್ ಎಸ್ಟೇಟ್ ಬಳಿಕ DeArc Studio ಎನ್ನುವಂತ ಆರ್ಕಿಟೆಕ್ಟ್ ಕಂಪನಿಯನ್ನು ಆರಂಭಿಸಿದೆ. ಅಲ್ಲದೇ ಆರ್ ಬಿ ಡಿ ವೆಂಚರ್ಸ್ ಎನ್ನುವಂತ ಕಂಪನಿಯನ್ನು ಆರಂಭಿಸಿ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಕೇಂದ್ರ ಸ್ಥಾನ ಮಾಡಿಕೊಂಡು ಮತ್ತಷ್ಟು ಔಧ್ಯಮಿಕ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಸಾಗರದಲ್ಲಿ ಆರ್ ಬಿ ಡಿ ಮೋಟಾರ್ಸ್ ಉದ್ಯಮ ಆರಂಭಿಸಿ, ರಾಯಲ್ ಎನ್ ಫೀಲ್ಡ್ ಪ್ರಿಯರ ಆಸೆಯನ್ನು ಈಡೇರಿಸುವ ಕೆಲಸ ಮಾಡುತ್ತಿದೆ. ಇದೀಗ ಆರ್ ಬಿ ಡಿ ವಾಟರ್ ಪಾರ್ಕ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರ ಮೂಲಕ ಮತ್ತಷ್ಟು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿ ಕೊಡುವತ್ತ ಅಣಿಯಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ದೇಶದ ಮಹಿಳೆಯರಿಗೆ ಗುಡ್ ನ್ಯೂಸ್: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಸಿಗಲಿದೆ ₹20,000 ತನಕ ವೇತನ
ಇವು ವಿಶ್ವದ ಅತಿ ಹೆಚ್ಚು `ಆದಾಯ’ ಹೊಂದಿರುವ ಟಾಪ್ 10 ಕಂಪನಿಗಳು : `ರಿಲಯನ್ಸ್’ಗೆ ಎಷ್ಟನೇ ಸ್ಥಾನ ಗೊತ್ತಾ?








