ಆಂಧ್ರಪ್ರದೇಶ : ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಕಲಬೆರಕೆ ತುಪ್ಪ ಬಳಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬೆರಕೆ ಬಗ್ಗೆ ಮಾಹಿತಿ ಇದ್ದರೂ ಕೂಡ ಟಿಟಿಡಿ ಯಿಂದ ತುಪ್ಪ ಖರೀದಿಸಲಾಗುತ್ತಿತ್ತು ಎಂದು ಸಿಬಿಐ ಸಲ್ಲಿಸಿದ ವರದಿಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ಕಳೆದ 2019 ರಿಂದ 2024 ರ ಅವಧಿಯಲ್ಲಿ ಕಲಬೆರಕೆ ತುಪ್ಪ ಬಳಕೆ ಆಗಿರುವುದು ಇದೀಗ ಪತ್ತೆಯಾಗಿದೆ. ರಾಸಾಯನಿಕಯುಕ್ತ ಬಳಕೆಯಾಗಿರುವುದು ಲ್ಯಾಬ್ ಪರೀಕ್ಷೆಯಲ್ಲಿ ಬಯಲಾಗಿದೆ. ಮೈಸೂರಿನ CFTRI (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ) ಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಕಲಬೆರಕೆ ತುಪ್ಪ ಬಳಸಿರುವುದು ದೃಢಪಟ್ಟಿತ್ತು. ತುಪ್ಪದಲ್ಲಿ ಬೀಟ ಸೆಟೊಸ್ಟೆರಲ್ ಎಂಬ ಕೆಮಿಕಲ್ ಅಂಶ ಇರುವುದು ಪತ್ತೆಯಾಗಿದೆ.








