Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

07/02/2026 11:18 PM

BIG NEWS: ರಾಜ್ಯದ ‘ಗ್ರಾಮ ಸಹಾಯಕ’ರಿಗೆ ಸಿಹಿಸುದ್ದಿ: ಸರ್ಕಾರದಿಂದ 5 ಲಕ್ಷದವರೆಗೆ ಒಂದು ಬಾರಿಗೆ ಇಡಿಗಂಟು ಸೌಲಭ್ಯ

07/02/2026 9:51 PM

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’
KARNATAKA

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

By kannadanewsnow0907/02/2026 11:18 PM

ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ನಿನ್ನೆಯಿಂದ ಆರಂಭಿಸಲಾಗಿತ್ತು. ಮೊದಲ ದಿನ ಕೊಂಚ ಇಳಿಕೆಯಲ್ಲಿದ್ದಂತ ಪ್ರವಾಸಿಗರ ಸಂಖ್ಯೆ, ಇಂದು ದಿಢೀರ್ ಏರಿಕೆಯಾಗಿ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಇಂದು ಸಾಗರದಲ್ಲಿ ಹೆಲಿ ಟೂರಿಸಂಗೆ ಜನರು ಮುಗಿ ಬಿದ್ದರು. 

ಹೌದು.. ಸಾಗರದಲ್ಲಿ ಮಾರಿ ಜಾತ್ರೆಯ ಪ್ರಯುಕ್ತ ಕಿರಣ್ ದೊಡ್ಮನಿ ಆಯೋಜಿಸಿರುವಂತ ಹೆಲಿ ಟೂರಿಸಂ ಪ್ರವಾಸಕ್ಕೆ ಸಾಗರೀಕರು ಮುಗಿ ಬಿದ್ದಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಆರಂಭಗೊಂಡ ಹೆಲಿಕಾಪ್ಟರ್ ಪ್ರವಾಸಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆಯಿತು. ಸಾಗರದ ನೂರಾರು ಸ್ನೇಹಿತರು, ಕುಟುಂಬಸ್ಥರು ನಾಮುಂದು, ತಾಮುಂದು ಎನ್ನುವಂತೆ ಹೆಲಿಕಾಪ್ಟರ್ ಪ್ರವಾಸ ಮಾಡಿ, ಸಾಗರವನ್ನು ಆಗಸದಿಂದ ನೋಡಿ ಬಂದರು.

ಇಂದು ಯಾರೆಲ್ಲ ಹೆಲಿಕಾಪ್ಟರ್ ರೈಡಿಂಗ್ ಗೊತ್ತಾ?

ಸಾಗರದ ಕಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಗಿರೀಶ್ ಕೋವಿ, ಉದ್ಯಮಿ ಪುರುಷೋತ್ತಮ್, ಶಾಸಕರ ಸಹಾಯಕ ಅವಿನಾಶ್, ಡ್ರೈವರ್ ಶಿವು ಹೊಡಹೊಸಳ್ಳಿ, ನಾರಾಯಣಪ್ಪ ಸೂರನಗದ್ದೆ, ಸಿಗಂದೂರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಟ್ರಸ್ಟಿ ಭೀರಪ್ಪ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರವಿ ಬಸರಾಣಿ, ಭೀಮನೇರಿ ಆನಂದ್, ಪೇಯಿಂಟರ್ಸ್ ಸಂಘದ ಅಧ್ಯಕ್ಷ ರಾಜು ಮಡಿವಾಳ, ಟಿಂಬರ್ ಉದ್ಯಮಿ ಗುರು ಶಿರವಾಳ ಸೇರಿದಂತೆ ಹಲವಾರು ಹೆಲಿಕಾಪ್ಟರ್ ಮೂಲಕ ಸಾಗರವನ್ನು ಬಾನಂಗಳದಿಂದ ನೋಡಿ ಬಂದರು.

ಹೆಲಿ ಟೂರಿಸಂ ಮಾಡಿ ಬಂದವರು ಹೇಳಿದ್ದೇನು?

ತಮ್ಮ ಹೆಲಿಕಾಪ್ಟರ್ ಪ್ರವಾಸದ ಬಗ್ಗೆ ಸಂತಸ ಹಂಚಿಕೊಂಡ ಗಿರೀಶ್ ಕೋವಿ ಅವರು, ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಲಾಗಿದೆ. ಸಾಗರದಲ್ಲಿ ಮೊದಲ ಬಾರಿಗೆ ಆಯೋಜಿಸಿರುವಂತ ಹೆಲಿಕಾಪ್ಟರ್ ಪ್ರವಾಸವನ್ನು ಮಾಡಿ ಬಂದೆ. ನಿಜಕ್ಕೂ ಮರೆಯಲಾಗದಂತ ಕ್ಷಣವಾಗಿತ್ತು. ವಿಮಾನದಲ್ಲಿ ಪ್ರಯಾಣ ಮಾಡಿದ್ದೇನೆ. ಆದರೇ ಸಾಗರವನ್ನು ಹೆಲಿಕಾಪ್ಟರ್ ಮೂಲಕ ಸುತ್ತಿ ಬರುವಂತಾಗಿದ್ದು ಹೆಲಿ ಟೂರಿಸಂನಿಂದ ಸಾಧ್ಯವಾಯಿತು ಎಂಬುದಾಗಿ ಹೇಳಿದರು.

ಭೀಮನೇರಿ ಆನಂದ್ ಮಾತನಾಡಿ, ಮೊದಲು ನಾನು ಹೆಲಿ ಟೂರಿಸಂ ಆಯೋಜಿಸಿರುವಂತ ಕಿರಣ್ ದೊಡ್ಮನಿಗೆ ಧನ್ಯವಾದ ಹೇಳೋದಕ್ಕೆ ಬಯಸುತ್ತೇನೆ. ಸಾಗರಕ್ಕೆ ಹೆಲಿಕಾಪ್ಟರ್ ತರಿಸಿ, ನಮ್ಮೂರನ್ನು ಆಕಾಶದಿಂದ ನೋಡುವಂತೆ ಮಾಡಿದ್ದು ತುಂಬಾನೇ ಚೆನ್ನಾಗಿದೆ. ಸಾಗರ ಒಂದು ರೌಂಡ್ ಸುತ್ತಿ ಬಂದ್ವಿ. ನಿಜಕ್ಕೂ ಮರೆಯಲಾರದಂತ ಅನುಭವ ಕೊಡ್ತು ಎಂದರು.

ಹಿರಿಯ ನಾಗರೀಕ ಮಹಳೆಯೊಬ್ಬರು ಮಾರಿಕಾಂಬೆಯ ಕೃಪೆಯಿಂದ ಹೆಲಿಕಾಪ್ಟರ್ ಪ್ರಯಾಣ ಮಾಡುವಂತೆ ಆಯ್ತು. ಹೆಲಿಕಾಪ್ಟರ್ ಹತ್ತಬೇಕು ಎನ್ನುವಂತ ಆಸೆಯಿತ್ತು. ಆ ಆಸೆಯನ್ನು ಇಂದು ಮಾರಿಕಾಂಬೆ ಈಡೇರಿಸಿದ್ದಾಳೆ. ಇಂತಹ ಅವಕಾಶ ಕಲ್ಪಿಸಿದಂತ ಎಲ್ಲರಿಗೂ ಧನ್ಯವಾದಗಳು ಅಂತ ಹೇಳಿದರು.

ಹೆಲಿ ಟೂರಿಸಂ ಮಾಡಿ ಬಂದ ಸ್ನೇಹ ಹಾಗೂ ಸಿಂಧು ಎನ್ನುವ ಯುವತಿಯರಿಬ್ಬರು, ಚೆನ್ನಾಗಿತ್ತು ಅನುಭವ. ಸೇಫ್ ಆಗಿ ಕರೆದುಕೊಂಡು ಬಂದರು. ತುಂಬಾ ಚೆನ್ನಾಗಿತ್ತು ವೀವ್. ಸಾಗರ ಇಷ್ಟು ಬ್ಯೂಟಿಪುಲ್ ಆಗಿ ಕಾಣಿಸುತ್ತಾ ಅನ್ನಿಸಿತು. ಎಲ್ಲರೂ ಒಮ್ಮೆ ಹೋಗಿ ಬನ್ನಿ ಎಂಬುದಾಗಿ ತಿಳಿಸಿದರು.

ಸಿಗಂದೂರು ಮಂಜಪ್ಪ ಎಂಬುವರು ಮಾತನಾಡಿ, ವಿಮಾನದಲ್ಲಿ ಯಾರು ಬೇಕಾದರೂ ಹೋಗಬಹುದು. ಆದರೇ ಹೆಲಿಕಾಪ್ಟರ್ ನಲ್ಲಿ ಹೋಗೋದು ಕಷ್ಟ. ಬಹಳ ಚಿಕ್ಕ ವಯಸ್ಸಿನಿಂದಲೂ ಮೇಲೆ ಹಾರಾಟ ಮಾಡಿ ಬರಬೇಕು ಎನ್ನುವಂತ ಆಸೆಯಿತ್ತು. ಆ ಆಸೆ ಇಂದು ಈಡೇರಿದೆ. ತುಂಬಾ ಚೆನ್ನಾಗಿತ್ತು ಹೆಲಿಕಾಪ್ಟರ್ ಮೂಲಕ ಸಾಗರ ನೋಡಿದ್ದು ಎಂಬುದಾಗಿ ಹೇಳಿದರು.

ಸಿಗಂದೂರು ಸೇತುವೆ, ಚೌಡೇಶ್ವರಿ ದೇವಸ್ಥಾನ ನೋಡಿ ಬಂದ ಪ್ರಧಾನ ಕಾರ್ಯದರ್ಶಿ ರವಿಕುಮಾರ್

ಇನ್ನೂ ಸಿಗಂದೂರು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರು, ಹೆಲಿಕಾಪ್ಟರ್ ಮೂಲಕ ತಾವು, ಟ್ರಸ್ಟಿ ಭೀರಪ್ಪ ಸೇರಿದಂತೆ ಇತರರ ಜೊತೆಗೂಡಿ ಪ್ರವಾಸ ಕೈಗೊಂಡರು. ಹೆಲಿಕಾಪ್ಟರ್ ಮೂಲಕ ಸಿಗಂದೂರು ತೂಗು ಸೇತುವೆ, ಸಿಗಂದೂರು ಚೌಡೇಶ್ವರಿ ದೇವಸ್ಥಾನವನ್ನು ಬಾನಂಗಳದಿಂದ ನೋಡಿ ಬಂದರು.

ಈ ಬಳಿಕ ಮಾತನಾಡಿದಂತ ಅವರು, ನಿಜಕ್ಕೂ ಇದೊಂದು ಅದ್ಭುತ ಅನುಭವ. ನಾನು ವಿಮಾನದಲ್ಲಿ ಹೋಗಿ ಬಂದಿದ್ದೇನೆ. ಆದರೇ ಸಿಗಂದೂರು ತೂಗು ಸೇತುವೆ, ದೇವಸ್ಥಾನವನ್ನು ಹೆಲಿಕಾಪ್ಯರ್ ಮೂಲಕ ನೋಡಿದ್ದು ಮಾತ್ರ ಮರೆಯಲಾಗದ ಕ್ಷಣವಾಗಿದೆ. ಸಾಗರದ ನಾಗರೀಕರೆಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಹೆಲಿಕಾಪ್ಟರ್ ನಲ್ಲಿ ಹೋಗಿ ಬನ್ನಿ. ನಿಮಗೂ ಮರೆಯಲಾಗದ ಕ್ಷಣವಾಗಿರುತ್ತದೆ ಎಂದರು.

ನಾಳೆ, ನಾಡಿದ್ದು ಮಾತ್ರವೇ ಹೆಲಿ ಟೂರಿಸಂ

ಸಾಗರದ ಮಾರಿಕಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಆಯೋಜಿಸಿರುವಂತ ಹೆಲಿ ಟೂರಿಸಂ ನಾಳೆ, ಮತ್ತು ನಾಡಿದ್ದು ಮಾತ್ರವೇ ಆಗಿದೆ. ಇಂದು 23ಕ್ಕೂ ಹೆಚ್ಚು ಬಾರಿ ಸಾಗರವನ್ನು ಅದರಲ್ಲಿ ಏರಿದಂತ ಜನರನ್ನು ಸುತ್ತಿಸಿಕೊಂಡು ಬಂದಿದೆ. ನೀವು ಸಾಗರವನ್ನು ಆಕಾಶದಿಂದ ಹೆಲಿಕಾಪ್ಟರ್ ಮೂಲಕ ನೋಡೋದನ್ನು ಮಿಸ್ ಮಾಡಬೇಡಿ. ನಾಳೆ, ನಾಡಿದ್ದು ಮಾತ್ರವೇ ಈ ಅವಕಾಶವಿದೆ. ಸೋ ಇನ್ನೇಕೆ ತಡ ಆಯೋಜಕರಾದಂತ ಕಿರಣ್ ದೊಡ್ಮನಿ ಅವರ ಮೊಬೈಲ್ ಸಂಖ್ಯೆ: 9945563294 ಅವರಿಗೆ ಕರೆ ಮಾಡಿ, ಈಗಲೇ ಟಿಕೆಟ್ ಕಾಯ್ದಿರಿಸಿ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯದ ‘ಗ್ರಾಮ ಸಹಾಯಕ’ರಿಗೆ ಸಿಹಿಸುದ್ದಿ: ಸರ್ಕಾರದಿಂದ 5 ಲಕ್ಷದವರೆಗೆ ಒಂದು ಬಾರಿಗೆ ಇಡಿಗಂಟು ಸೌಲಭ್ಯ

07/02/2026 9:51 PM2 Mins Read

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM1 Min Read
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM1 Min Read
Recent News

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

07/02/2026 11:18 PM

BIG NEWS: ರಾಜ್ಯದ ‘ಗ್ರಾಮ ಸಹಾಯಕ’ರಿಗೆ ಸಿಹಿಸುದ್ದಿ: ಸರ್ಕಾರದಿಂದ 5 ಲಕ್ಷದವರೆಗೆ ಒಂದು ಬಾರಿಗೆ ಇಡಿಗಂಟು ಸೌಲಭ್ಯ

07/02/2026 9:51 PM

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM
State News
KARNATAKA

ಇಂದು ಸಾಗರದಲ್ಲಿ ‘ಹೆಲಿ ಟೂರಿಸಂ’ಗೆ ಮುಗಿಬಿದ್ದ ಜನರು: ಜಸ್ಟ್ ನಾಳೆ, ನಾಡಿದ್ದು ಮಾತ್ರವೇ ‘ಹೆಲಿಕಾಪ್ಟರ್ ಪ್ರವಾಸ’

By kannadanewsnow0907/02/2026 11:18 PM KARNATAKA 3 Mins Read

ಶಿವಮೊಗ್ಗ: ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ನಿನ್ನೆಯಿಂದ ಆರಂಭಿಸಲಾಗಿತ್ತು. ಮೊದಲ ದಿನ ಕೊಂಚ ಇಳಿಕೆಯಲ್ಲಿದ್ದಂತ…

BIG NEWS: ರಾಜ್ಯದ ‘ಗ್ರಾಮ ಸಹಾಯಕ’ರಿಗೆ ಸಿಹಿಸುದ್ದಿ: ಸರ್ಕಾರದಿಂದ 5 ಲಕ್ಷದವರೆಗೆ ಒಂದು ಬಾರಿಗೆ ಇಡಿಗಂಟು ಸೌಲಭ್ಯ

07/02/2026 9:51 PM

BIG NEWS : ಶೀಘ್ರ ಬೆಂಗಳೂರು-ಮಂಗಳೂರು ಮಧ್ಯ 2 ‘ವಂದೇ ಭಾರತ್’ ರೈಲು ಸೇವೆ ಆರಂಭ : ಸಚಿವ ಅಶ್ವಿನಿ ವೈಷ್ಣವ್

07/02/2026 9:37 PM
BREAKING NEWS

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ರಸ್ತೆ ದಾಟುತ್ತಿದ್ದಾಗ ಟ್ರಕ್ ಹರಿದು, ಇಬ್ಬರು ಮಹಿಳೆಯರು ಸಾವು!

07/02/2026 9:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.