ಕೋಲಾರ : ಕೋಲಾರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ಏಳು ದಿನದ ನವಜಾತ ಗಂಡು ಮಗುವನ್ನು 5 ಲಕ್ಷಕ್ಕೆ ಮಾರಾಟ ಮಾಡುವಾಗ ದಂಪತಿಗಳು ಸಿಗಿಬಿದ್ದಿರುವ ಘಟನೆ ವರದಿಯಾಗಿದೆ.
ನಿತು ಮತ್ತು ರಾಘವೇಂದ್ರ ಎನ್ನುವ ದಂಪತಿಗಳು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಮಧ್ಯವರ್ತಿ ನಾರಾಯಣಸ್ವಾಮಿ ಮೂಲಕ ಮಗು ಮಾರಾಟಕ್ಕೆ ತಂದೆ ರಾಘವೇಂದ್ರ ಮತ್ತು ತಾಯಿ ನೀತು ಮುಂದಾಗಿದ್ದರು. ಈಗಾಗಲೇ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಮೂರನೇ ಮಗು ಬೇಡ ಎಂದು ಮಾರಾಟಕ್ಕೆ ಮುಂದಾಗಿದ್ದಾರೆ. ಮಗು ಮಾರಾಟದ ವಿಷಯ ತಿಳಿದು ಸದ್ಯ ಪೋಲೀಸರು ದಂಪತಿಯನ್ನು ಹಾಗು ಮಧ್ಯವರ್ತಿ ನಾರಾಯಣಸ್ವಾಮಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.








