ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ದರೋಡೆ ನಡೆದಿದ್ದು ಮನೆಯ ಬೀಗ ಒಡೆದು ಹಣ ಮತ್ತು ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ಡಿ ಆರ್ ಎಂ ಬಡಾವಣೆಯಲ್ಲಿ ಹರೀಶ್ ಎಂಬುವರ ಮನೆಯಲ್ಲಿ ಈ ಒಂದು ಕಳ್ಳತನ ನಡೆದಿದೆ ಕುಟುಂಬದವರು ಎಲ್ಲರೂ ತಿರುಪತಿಗೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು 30 ಗ್ರಾಂ ಚಿನ್ನ 450 g ಬೆಳ್ಳಿ 46,000 ನಗದು ಹಣ ಕಳ್ಳತನ ಮಾಡಿದ್ದಾರೆ ಈ ಕುರಿತು ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








