ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಮೆಟ್ರೋ ಪ್ರಯಾಣ ದರ ಏರಿಕೆ ಮಾಡುವಂತೆ ಸಲಹೆ ನೀಡಿದ್ದೇ ರಾಜ್ಯ ಸರ್ಕಾರ ಎಂಬುದಾಗಿ ಸಂಸದ ತೇಜಸ್ವಿ ಸೂರ್ಯ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದಂತ ಅವರು, ಕರ್ನಾಟಕ ಸರ್ಕಾರದ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಫೇರ್ ಫಿಕ್ಸೇಷನ್ ಸಮಿತಿಯ ಮುಂದೆ ಮೆಟ್ರೋ ದರಗಳನ್ನು ವಾರ್ಷಿಕವಾಗಿ ಪರಿಷ್ಕರಿಸುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದರು.
ಕೊಚ್ಚಿನ್, ಹೈದರಾಬಾದ್, ದೆಹಲಿಯಲ್ಲಿ ವಾರ್ಷಿಕ ದರ ಪರಿಷ್ಕರಣೆ ನಿಯಮ ಇಲ್ಲ. ಆದರೇ ಕರ್ನಾಟಕದ ಅಧಿಕಾರಿಗಳು ಪ್ರತಿ ವರ್ಷ ದರ ಏರಿಕೆಗೆ ಶಿಫಾರಸ್ಸು ಮಾಡಿದ್ದರು. ಈ ಬಗ್ಗೆ ಬಿಎಂಆರ್ ಸಿಎಲ್ ಫೇರ್ ಫಿಕ್ಸೇಷನ್ ಸಮಿತಿಗೆ ಪತ್ರ ಬರೆದು, ಶೀಘ್ರವಾಗಿ ಸಮಿತಿಯನ್ನು ರಚಿಸುವಂತೆ ಒತ್ತಾಯಿಸಿದೆ ಎಂದರು.
ಅಂದಹಾಗೇ ಕಳೆದ ವರ್ಷ ಕೂಡ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಲಾಗಿತ್ತು. ಶೇ.90ರಷ್ಟು ಟಿಕೆಟ್ ದರ ಹೆಚ್ಚಿಸಿದ್ದಕ್ಕೆ ಪ್ರಯಾಣಿಕರು ವ್ಯಾಪಕ ವಿರೋಧ ವ್ಯಕ್ತ ಪಡಿಸಿದ್ದರು. ಆ ಬಳಿಕ ಕೊಂಚ ರಿಲೀಫ್ ಎನ್ನುವಂತೆ ವ್ಯತ್ಯಾಸದ ದರಗಳನ್ನು ಕಡಿಮೆ ಮಾಡಿತ್ತು. ಇದೀಗ ಮತ್ತೆ ನಮ್ಮ ಮೆಟ್ರೋ ಪ್ರಯಾಣದ ದರ ಏರಿಕೆ ಮಾಡಿ, ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ.
ಫೆ.9ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ | Power Cut In Bengaluru
BREAKING: 54 ನಿಗಮ, ಮಂಡಳಿ ಅಧ್ಯಕ್ಷರಿಗೆ ಬಂಫರ್ ಗಿಫ್ಟ್: ರಾಜ್ಯ ಸಚಿವರ ಸ್ಥಾನಮಾನ ನೀಡಿ ಸರ್ಕಾರ ಆದೇಶ








