ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಭಯೋತ್ಪಾದಕ ಸಾವನಪ್ಪಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತಡರಾತ್ರಿ ಸಾಧಿಕ್ ಪಾಷಾ (47) ಇದೀಗ ಸಾವನಪ್ಪಿದ್ದಾನೆ. ಕಳೆದ ಆರು ತಿಂಗಳಿನಿಂದ ಲೋ ಬಿಪಿ ಮತ್ತು ಹೈ ಶುಗರ್ ಸೇರಿದಂತೆ ಕೆಲ ಅನಾರೋಗ್ಯ ಸಮಸ್ಯೆಯಿಂದ ಶಂಕಿತ ಭಯೋತ್ಪಾದಕ ಬಳಲುತ್ತಿದ್ದ.
ಕಳೆದ 2020 ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಇದ್ದ. ಸುದ್ದಗುಂಟೆಪಾಳ್ಯ ಸ್ಪೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಜೈಲು ಸೇರಿದ್ದ. ಪ್ರಕರಣ ಸಂಬಂಧ NIA ಅಧಿಕಾರಿಗಳು ಸಾಧಿಕ್ ಪಾಶ ಸೇರಿದಂತೆ 6 ಶಂಕಿತರನ್ನು ಅರೆಸ್ಟ್ ಮಾಡಿದ್ದರು. ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.








