ಬೀದರ್ : ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ಜೋರಾಗಿದ್ದು ಒಂದು ಕಡೆ ಐದು ವರ್ಷಗಳ ಕಾಲ ನಮ್ಮ ತಂದೆಯೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದರೆ ಮತ್ತೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಎರಡು ಬಾರಿ ಚಾನ್ಸ್ ಮಿಸ್ ಆಗಿರಬಹುದು ಆದರೆ ಮೂರನೇ ಬಾರಿ ಮಿಸ್ ಆಗಲ್ಲ ಎಂದು ಸಿಎಂ ಕುರ್ಚಿಗಾಗಿ ವಾಕ್ಸಮರ ನಡೆಯುತ್ತಿದೆ.
ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಯತೀಂದ್ರ ಅವರೇ ನಮ್ಮ ಹೈಕಮಾಂಡ್ ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಏನೇ ಆಗಿದ್ದರೂ ಹೈಕಮಾಂಡ್ ಹೈಕಮಾಂಡೆ. ಅವರ ನಿರ್ಧಾರವೇ ಅಂತಿಮ ಪಕ್ಷದ ಎಲ್ಲರೂ ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಮೊನ್ನೆ ಕೂಡ ಅದನ್ನೇ ಹೇಳಿದ್ದೇನೆ ಹಾಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದೇನೆ. ಆದರೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಸಹ ಹೇಳಿದ್ದೇನೆ.
ಎಲ್ಲಾ ಪಕ್ಷಗಳಲ್ಲೂ ಮುಖ್ಯಮಂತ್ರಿ ಆಕಾಂಕ್ಷಿಗಳು ಬೇಕಾದಷ್ಟು ಇರುತ್ತಾರೆ. ಹೀಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂಬ ಮಾತು ಕೇಳಿ ಬರುತ್ತಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಏನು ಹೇಳಿಲ್ಲ. ಹೀಗಾಗಿ ಬದಲಾವಣೆ ಆಗಲ್ಲ ಅಂತಾನೆ ಅರ್ಥ. ಸಿಎಂ ಬದಲಾವಣೆ ವಿಚಾರದಲ್ಲಿ ಫೈನಲ್ ಮಾಡುವುದು ಹೈಕಮಾಂಡ್. ಸದ್ಯಕ್ಕೆ ಹೈ ಕಮಾಂಡ್ ಈ ವಿಚಾರದಲ್ಲಿ ಏನು ನಿರ್ಧಾರ ತೆಗೆದುಕೊಂಡಿಲ್ಲ. ಹಾಗಾಗಿ ಸಿದ್ದರಾಮಯ್ಯನವರೇ








