ಹಾಸನ : ಈಗಾಗಲೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆ ಜೋರಾಗಿದ್ದು ಒಂದು ಕಡೆ ಐದು ವರ್ಷಗಳ ಕಾಲ ನಮ್ಮ ತಂದೆಯೇ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡುತ್ತಿದ್ದರೆ ಮತ್ತೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಆಪ್ತರು ಎರಡು ಬಾರಿ ಚಾನ್ಸ್ ಮಿಸ್ ಆಗಿರಬಹುದು ಆದರೆ ಮೂರನೇ ಬಾರಿ ಮಿಸ್ ಆಗಲ್ಲ ಎಂದು ಸಿಎಂ ಕುರ್ಚಿಗಾಗಿ ವಾಕ್ಸಮರ ನಡೆಯುತ್ತಿದೆ.
ಇದೀಗ “ಗಟ್ಟುಂಡ ಯೋಗಿ ಅಟ್ಟುಂಡ ರಾಯ ಜಟ್ಟಿಯಂತೆ ಮೆಟ್ಟಿ ಮಂತ್ರಿಯ ಪದವಿಗೆ ಅಟ್ಟಿ ಬರುವನೋ ಡಿಕೆಶಿ” ಎಂದು ಗಜೇಂದ್ರಗಡದ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.ಈ ಹೇಳಿಕೆಯು ಕರ್ನಾಟಕದ ರಾಜಕೀಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಂದಿನ ಪ್ರಭಾವದ ಬಗ್ಗೆ ಸುಳಿವು ನೀಡುತ್ತದೆ.
ಈ ಭವಿಷ್ಯವಾಣಿಯ ಅರ್ಥ!
* ಗಟ್ಟುಂಡ ಯೋಗಿ : ಇದು ಬಲಶಾಲಿ ಅಥವಾ ಗಟ್ಟಿಯಾದ ಯೋಗಿಯನ್ನು ಸೂಚಿಸುತ್ತದೆ, ಅವರು ರಾಜಕೀಯ ಭವಿಷ್ಯ ನುಡಿದಿದ್ದಾರೆ.
* ಅಟ್ಟುಂಡ ರಾಯ : ಇದು ರಾಜಕೀಯ ಪರಿಸ್ಥಿತಿಯನ್ನು ನಿಯಂತ್ರಿಸುವ ಅಥವಾ ಚಲಾಯಿಸುವ ಶಕ್ತಿಯನ್ನು ಸೂಚಿಸುತ್ತದೆ.
* ಡಿಕೆಶಿ : ಈ ಹೇಳಿಕೆಯು ಡಿಸಿಎಂ ಡಿಕೆ ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆಯನ್ನು ಸೂಚಿಸುತ್ತದೆ.








