ಮೈಸೂರು : ಮೈಸೂರಿನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ ವಿಜಯನಗರ ಮೂರನೇ ಹಂತದಲ್ಲಿ 7 ಎಕರೆ ಅತಿಕ್ರಮವನ್ನು ತೆರವುಗೊಳಿಸಲಾಯಿತು. ಸುಮಾರು 140 ಕೋಟಿ ಮೌಲ್ಯದ ಆಸ್ತಿಯನ್ನು MDA (Mysuru Development Authority) ವಶಕ್ಕೆ ಪಡೆದುಕೊಂಡಿದೆ. ಸರ್ಕಾರಿ ಜಾಗ ಅತಿಕ್ರಮಸಿ ಖಾಸಗಿ ವ್ಯಕ್ತಿಗಳು ಕ್ರಮ ಕಟ್ಟಡ ತರವುಗೊಳಿಸಿ ಎಂಡಿಎ ಭೂಮಿ ವಶಕ್ಕೆ ಪಡೆದುಕೊಂಡಿದೆ.
ಇನ್ನು ನಿನ್ನೆಯೂ ಸಹ ಜೆಸಿಬಿ ಯಂತ್ರಗಳ ಘರ್ಜನೆಯೊಂದಿಗೆ ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು. ತಹಶೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ತಾಲೂಕು ಆಡಳಿತ ಮೈಸೂರು ಗ್ರಾಮ ಸರ್ವೇ ನಂ.87ರಲ್ಲಿ 38 ಗುಂಟೆ ಭೂಮಿಯನ್ನು ವಶಕ್ಕೆ ಪಡೆದುಕೊಂಡಿತು.
ಈ ಭೂಮಿಯನ್ನು ಖಾಸಗಿ ವ್ಯಕ್ತಿಗಳು ವಾಹನ ಪಾರ್ಕಿಂಗ್ ಹಾಗೂ ಟೀ ಅಂಗಡಿಗಾಗಿ ಅಕ್ರಮವಾಗಿ ಬಳಸುತ್ತಿದ್ದರು ಮತ್ತು ಪ್ರತಿದಿನ ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದರು. ಈ ಹಿಂದೆ ಅಲ್ಪಸಂಖ್ಯಾತ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ನಿಲಯಕ್ಕೆ ಮಂಜೂರಾಗಿದ್ದ ಕೋಟ್ಯಂತರ ಮೌಲ್ಯದ ಸರ್ಕಾರಿ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಆಡಳಿತ ವಶಕ್ಕೆ ಪಡೆದಿದೆ.








