ಶಿವಮೊಗ್ಗ : ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರ ಸೇರಿದಂತೆ ಒಟ್ಟು ಎಂಟು ಆರೋಪಿಗಳು ವಸಂತ ನಾಯಕ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿ ಇದ್ದಾರೆ. ಜ್ಯೋತಿಷಿ ಕಮಲಾಕರ ಭಟ್ಟ ವಿರುದ್ಧ ಮತ್ತೊಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಹೌದು ಗೋಶಾಲೆ ಹೆಸರಿನಲ್ಲಿ ಕಮಲಾಕಾರ್ ಭಟ್ ಕೋಟಿ ಕೋಟಿ ಆಸ್ತಿ ಗಳಿಕೆ ಮಾಡಿದ್ದಾರೆ. ಶಿವಮೊಗ್ಗದ ಮುದುವಾಲ ಗ್ರಾಮದಲ್ಲಿ ಈ ಒಂದು ಜಮೀನು ಇದೆ, ಮಠ ಹಾಗೂ ಗೋಶಾಲೆ ನಿರ್ಮಾಣಕ್ಕೆ 10 ಎಕರೆ ಜಮೀನು, ಖರೀದಿ ಮಾಡಿರುತ್ತಾರೆ ಐದು ವರ್ಷದ ಹಿಂದೆ ಮೂರುವರೆ ಕೋಟಿಗೆ 10 ಎಕರೆ ಜಮೀನು ಖರೀದಿ ಮಾಡಿದ್ದರು.
ಇದೀಗ ಜಮೀನಿನ ಬೆಲೆ 6 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಲ್ಲದೇ ಶೃಂಗೇರಿ ಶ್ರೀಗಳು ಸಹ ಈ ಒಂದು ಗೋಶಾಲೆಗೆ ಭೇಟಿ ನೀಡಿದ್ದರು. ಆದರೆ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಗೋಶಾಲೆ ಬಂದ್ ಆಗಿದೆ. ಗೋ ಶಾಲೆ ಹೆಸರಿನಲ್ಲಿ ಕಮಲಾಕರ್ ಭಟ್ ಕೋಟಿ ಆಸ್ತಿಗಳಿಕೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.








