ಮೈಸೂರು : ಮೈಸೂರಿನಲ್ಲಿ ದಿನಕ್ಕೊಂದು ಡ್ರಗ್ ತಯಾರಿಕಾ ಘಟಕ ಪತ್ತೆ ಹಿನ್ನಲೆಯಲ್ಲಿ ಡ್ರಗ್ ಹಾವಳಿ ತಡೆಗಟ್ಟುವಲ್ಲಿ ಸಿಸಿಬಿ ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಸಿಸಿಬಿ ಪೊಲೀಸ ವಿಂಗ್ ಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಒಂದೇ ಬಾರಿಗೆ ಸಿಸಿಬಿಯ ಸುಮಾರು 10 ಸಿಬ್ಬಂದಿಗಳು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿ ಕಮಿಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.
ಕಮಿಷನರ್ ಸೀಮಾ ಲಾಟ್ಕರ್ ಸಿಸಿಬಿ ಇಂದ ಮೂಲ ಸ್ಥಾನಕ್ಕೆ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಸಾಕಷ್ಟು ದಿನಗಳಿಂದ ಸಿಸಿಬಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹಾಗು ಹೆಡ್ ಕಾನ್ಸ್ಟೇಬಲ್ ಗಳು ಕೆಲಸ ಮಾಡುತ್ತಿದ್ದರು. ಮಾರಾಟಗಾರರ ಬಗೆಗಿನ ಸುಳಿವುಗಳ ವಿಚಾರದಲ್ಲಿ ಲೋಪ ಕಂಡು ಬಂದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿಗೆ ಹೆಚ್ಚಿನ ಒತ್ತು ನೀಡಲು ಕಮಿಷನರ್ ಸೀಮಾ ಲಾಟ್ಕರ್ ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.








