ಬಳ್ಳಾರಿ : ಬಳ್ಳಾರಿಯ ಆಂಜನೇಯ ಸ್ವಾಮಿ ದೇಗುಳಲಿ ಮಾಂಸದ ತುಂಡುಗಳು ಪತ್ತೆಯಾಗಿದ್ದು ಮಾಂಸದ ತುಂಡುಗಳನ್ನು ನೋಡಿ ಅರ್ಚಕ ಶಾಕ್ ಆಗಿದ್ದಾರೆ. ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ. ಬಳ್ಳಾರಿ ನಗರದ ನಾಗಲಕೇರಿಯಲ್ಲಿರುವ ದೇವಸ್ಥಾನದಲ್ಲಿ ಮಾಂಸದ ತುಂಡುಗಳು ಪತ್ತೆಯಾಗಿವೆ.
ಮಾಂಸದ ತುಂಡುಗಳನ್ನ ನೋಡಿ ತಕ್ಷಣ ಅರ್ಚಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ದೇವಸ್ಥಾನದ ಬಳಿ ಭಕ್ತರ ದಂಡೆ ಜಮಾಯಿಸಿದೆ. ಘಟನಾ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಭಕ್ತರು ಯಾರು ಈ ಕೃತ್ಯ ಎಸಗಿದ್ದು? ಅಥವಾ ಇದರ ಹಿಂದೆ ಯಾರೂ ಕೈವಾಡ ಇದೆ ಅಥವಾ ಅಚಾತುರ್ಯವಾಗಿ ನಡೆದಿದೆಯೋ ಎನ್ನುವುದರ ಕುರಿತು ತನಿಖೆ ನಡೆಸಿ ಎಂದು ಭಕ್ತರು ಪೊಲೀಸರಿಗೆ ಮನವಿ ಮಾಡಿದ್ದಾರೆ.








