ಬೆಂಗಳೂರು : ಮೈಸೂರು ಜಿಲ್ಲೆಯ ಕೆ ಆರ್ ನಗರದ ಮಹಿಳೆ ಕಿಡ್ನಾಪ್ಣಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ರದ್ದು ಕೋರಿ ಹೆಚ್ ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ವಿಚಾರಣೆಯ ವೇಳೆ ಎಚ್ ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ತಡೆಯನ್ನು ಹೈಕೋರ್ಟ್ ತೆರವುಗೊಳಿಸಿತು.
ವಾದಮನೆಗೆ ಎಚ್ ಡಿ ರೇವಣ್ಣ ಪರ ವಕೀಲರು ಕಾಲಾವಕಾಶ ಕೋರಿದರು ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಇದ್ದಾರೆ ಎಂಬ ಕಾರಣ ನೀಡಿ ಮನವಿ ಮಾಡಲಾಯಿತು ಎಚ್ ಡಿ ರೇವಣ್ಣ ಪರ ವಕೀಲರ ಮನವಿಗೆ ಹೈಕೋರ್ಟ್ ಇದೆ ವೇಳೆ ಅಸಮಾಧಾನ ಹೊರಹಾಕಿದ್ದು, ಶಾಸಕ ಎಚ್ ಡಿ ರೇವಣ್ಣ ವಿರುದ್ಧ ದೋಷಾರೋಪ ಹೊರಿಸಿದಂತೆ ನೀಡಿದ್ದ ಮಧ್ಯಂತರ ತಡೆ ತೆರವುಗೊಳಿಸಲಾಯಿತು. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತು.








