ಮೈಸೂರು : ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಕೋರ್ಟ್ ಆವರಣದಲ್ಲಿಯೇ ವಕೀಲನ ಮೇಲೆ ಹಲ್ಲೆ ನಡೆಸಲಾಗಿದೆ ಮೈಸೂರು ಜಿಲ್ಲೆಯ ಟಿ ನರಸೀಪುರ ಕೋರ್ಟ್ ಮುಂಭಾಗ ಈ ಒಂದು ಘಟನೆ ನಡೆದಿದ್ದು, ಸಂತೋಷ ಎಂಬಾತನಿಂದ ತೊಟ್ಟಬಾಡಿ ಮಹದೇವಸ್ವಾಮಿ ಮೇಲೆ ಹಲ್ಲೆ ನಡೆದಿದೆ.
ಮಹದೇವಸ್ವಾಮಿ ಟಿ ನರಸಿಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷನಾಗಿದ್ದು, ಹಲ್ಲೆಗೆ ಒಳಗಾದ ಮಹದೇವಸ್ವಾಮಿಗೆ ಟಿ ನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಸಂತೋಷವನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದಾರೆ ಘಟನೆ ಸಂಭಂದ ಟಿ ನರಸಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಕೀಲ ಮಹದೇವಸ್ವಾಮಿ ಮೇಲಿನ ಹಲ್ಲಿಗೆ ವಕೀಲರ ಸಂಘ ಇದೀಗ ಖಂಡನೆ ವ್ಯಕ್ತಪಡಿಸಿದೆ.








