ನವದೆಹಲಿ : ಭಾರತ-ಯುನೈಟೆಡ್ ಸ್ಟೇಟ್ಸ್ ವ್ಯಾಪಾರ ಒಪ್ಪಂದದಲ್ಲಿ ಭಾರತದ ಕೃಷಿ, ಡೈರಿ ಮತ್ತು ಇತರ ಸೂಕ್ಷ್ಮ ವಲಯಗಳನ್ನ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ.
ಸೋಮವಾರ ತಡರಾತ್ರಿ ಭಾರತ ಮತ್ತು ಅಮೆರಿಕಗಳು ಹೆಚ್ಚಿನ ಮೌಲ್ಯದ ವ್ಯಾಪಾರ ಒಪ್ಪಂದವನ್ನ ಅಂತಿಮಗೊಳಿಸಿದವು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನ ಪ್ರಸ್ತುತ ಶೇ. 25 ರಿಂದ ಶೇ. 18ಕ್ಕೆ ಇಳಿಸುವುದಾಗಿ ಪ್ರಸ್ತಾಪಿಸಿದರು. ನಂತ್ರ ಭಾರತವು ರಷ್ಯಾದ ತೈಲ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ಭಾರತೀಯ ರಫ್ತಿನ ಮೇಲಿನ ಒಟ್ಟಾರೆ ಸುಂಕಗಳು ಶೇ. 18 ಕ್ಕೆ ಸ್ಥಿರವಾಗುತ್ತವೆ ಎಂದು ದೃಢಪಡಿಸಿದರು.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಎಲ್ಲಾ ನೆರೆಹೊರೆಯ ದೇಶಗಳಿಗೆ ಹೋಲಿಸಿದರೆ ಭಾರತವು ಅಮೆರಿಕದೊಂದಿಗೆ ಅತ್ಯುತ್ತಮ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ ಎಂದು ಹೇಳಿದರು.
‘ಪುಲ್ಪುರಿ’ಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡ್ತಿದ್ದೀರಾ.? ಅಯ್ಯೋ, ಈ ಒಂದು ತಪ್ಪು ಕ್ಯಾನ್ಸರ್’ಗೆ ಕಾರಣವಾಗ್ಬೋದು!
‘ನಾವು ಅಮೆರಿಕದೊಂದಿಗೆ ಉತ್ತಮ ಒಪ್ಪಂದ ಮಾಡಿಕೊಂಡಿದ್ದೇವೆ’ : ವ್ಯಾಪಾರ ಒಪ್ಪಂದದ ಕುರಿತು ‘ಪಿಯೂಷ್ ಗೋಯಲ್’








