ರಾಯಚೂರು : ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಶಾಕ್ ನಿಂದ ಬಾಲಗೆ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೆಚ್ಚುವರಿ ಮುಖ್ಯ ಶಿಕ್ಷಕ ಪರಸಪ್ಪ ಮೈಲಾರಪ್ಪ ಚಲವಾದಿ ಅಮಾನತು ಮಾಡಲಾಗಿದೆ ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿ ತೋರಿದ ಆರೋಪದ ಅಡಿ ಮುಖ್ಯ ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.
ಪರಸಪ್ಪ ಮೈಲಾರಪ್ಪನನ್ನು ಅಮಾನತುಗೊಳಿಸಿ ರಾಯಚೂರು ಡಿಡಿಪಿಐ ಕೇಡಿ ಬಡಿಗೇರ್ ಆದೇಶ ಹೊರಡಿಸಿದ್ದಾರೆ ಕುರಕುಂದ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿತ್ತು ಅವರ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಶಾಲೆಯಲ್ಲಿ ವಿದ್ಯುತ್ ಶಾಕ್ ನಿಂದ 5 ನೇ ತರಗತಿಯ ತನುಶ್ರೀ ಮೃತಪಟ್ಟಿದ್ದಳು. ಘಟನೆ ಸಂಭಂದ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








