ಕಾಸರಗೋಡು : ಕೌಟುಂಬಿಕ ಕಲಹದಿಂದ ತಂದೆ ಒಬ್ಬ ಮಗಳನ್ನೆ ಭೀಕರವಾಗಿ ಕೊಲೆ ಮಾಡಿದ್ದಾನೆ. ಕಾಸರಗೋಡಿನ ಮಂಜೇಶ್ವರದ ತೂಮೀನಾಡಿನಲ್ಲಿ ಒಂದು ಘಟನೆ ಸಂಭವಿಸಿದೆ. 18 ವರ್ಷದ ಮಗಳು ಜುಮ್ಮೈಲ ಕೊಲೆಯಾದ ದುರ್ದೈವಿಯಾಗಿದ್ದು, ಜುಮ್ಮೈಲಾ ತಂದೆ ಉಮ್ಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದಾನೆ.
ಆರೋಪಿ ಫಾರೂಕ್ ಪತ್ನಿಯ ಸಹೋದರಿ ಮನೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಅದೇ ಮನೆಯಲ್ಲಿ ವಾಸವಿದ್ದ ಫಾರೂಕ್ ಪತ್ನಿ ಹಾಗೂ ಮಗಳು. ಫಾರೂಕ್ ಮತ್ತು ಪತ್ನಿ ತಾಹಿರ ನಡುವೆ ಆಸ್ತಿ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಗಲಾಟೆ ತಾರಕಕ್ಕೆ ಏರಿ ವಿಚ್ಚೆದನದ ಮಾತುಕತೆಯು ನಡೆದಿತ್ತು. ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಫಾರೂಕ್ ಬೇಡಿಕೆ ಇಟ್ಟಿದ್ದಾನೆ.
ಇದೆ ವೇಳೆ ಜಗಳ ಬಿಡಿಸಲು ಜುಮೈಲ ಬಂದಿದ್ದಾಳೆ. ಉಮರ್ ಮತ್ತು ಜುಮೈಲ ಚಿಕ್ಕಪ್ಪ ಶೇಕುಂ ನಡುವೆ ಜಗಳ ಆಗುತ್ತಿದೆ.ಈ ವೇಳೆ ಅಪ್ಪನಿಂದಲೇ ಕತ್ತಿ ಏಟು ತಗುಲಿ ಜುಮೈಲ ಸಾವನಪ್ಪಿದ್ದಾಳೆ. ಆರೋಪಿ ಉಮರ್ ಫಾರೂಕ್ ನನ್ನ ಮಂಜೇಶ್ವರ ಠಾಣೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ.








